Select Your Language

Notifications

webdunia
webdunia
webdunia
webdunia

ಪುಟಿನ್‌ಗೆ ವೈಯಕ್ತಿಕ ನಿರ್ಬಂಧ!?

ಪುಟಿನ್‌ಗೆ ವೈಯಕ್ತಿಕ ನಿರ್ಬಂಧ!?
ನವದೆಹಲಿ , ಭಾನುವಾರ, 27 ಫೆಬ್ರವರಿ 2022 (08:09 IST)
ವಾಷಿಂಗ್ಟನ್ : ಉಕ್ರೇನ್ ಮೇಲಿನ ದಾಳಿ ಖಂಡಿಸಿ ರಷ್ಯಾ ಮೇಲೆ ಆರ್ಥಿಕ ಯುದ್ಧ ಸಾರಿರುವ ಅಮೆರಿಕಾ ಮತ್ತೊಂದು ಪ್ರಮುಖ ನಿರ್ಣಯ ತೆಗೆದುಕೊಂಡಿದೆ.

ರಷ್ಯಾ ಸರ್ಕಾರದ ವಿರುದ್ಧ ದಿಗ್ಬಂಧನದ ಅಸ್ತ್ರ ಝಳಪಿಸಿದ್ದ ಅಮೆರಿಕಾ ಈಗ ನೇರವಾಗಿ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಮತ್ತು ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ಮೇಲೆ ವೈಯಕ್ತಿಕ ನಿರ್ಬಂಧಗಳ ಹೇರಿ ಶಾಕ್ ನೀಡಲು ಮುಂದಾಗಿದೆ.

ಪುಟಿನ್, ಲಾವ್ರೋವ್ ಆಸ್ತಿಗಳನ್ನು ಫ್ರೀಜ್ ಮಾಡುವ ಐರೋಪ್ಯ ಒಕ್ಕೂಟದ ನಿರ್ಧಾರವನ್ನು ಬೆಂಬಲಿಸಿದೆ. ಈ ಹಿಂದೆ ಉತ್ತರ ಕೋರಿಯಾದ ಕಿಮ್ ಜಾಂಗ್ ಉನ್, ಬೆಲಾರಸ್ನ ಲುಕಷೆಂಕೋ, ಸಿರಿಯಾದ ಬಷರ್ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿದ ಮಾದರಿಯಲ್ಲೇ ಪುಟಿನ್,

ಲಾವ್ರೋವ್ ಸೇರಿ 11 ಪ್ರಮುಖರ ಮೇಲೆ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ. ಈ ದಿಗ್ಬಂಧನದಿಂದಾಗಿ ಅವರ ಪ್ರಯಾಣಕ್ಕೆ, ಆರ್ಥಿಕ ಚಟುವಟಿಕೆಗೆ ಬ್ರೇಕ್ ಬಿದ್ದಂತಾಗಿದೆ. 

ಆದರೆ ಇದರ ಪ್ರಭಾವ ಪುಟಿನ್ ಮೇಲೆ ಬೀಳುವ ಸಾಧ್ಯತೆ ಕಡಿಮೆ. ಯಾಕೆಂದರೆ ಈ ಬಗ್ಗೆ ಮೊದಲೇ ಚಿಂತಿಸಿರುವ 200 ಬಿಲಿಯನ್ಗಳ ಒಡೆಯ ಪುಟಿನ್ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವಸ್ತ್ರ ಸಂಹಿತೆ ಕಡ್ಡಾಯ!