Select Your Language

Notifications

webdunia
webdunia
webdunia
webdunia

ಪುಟಿನ್ ಬ್ಲ್ಯಾಕ್ ಬೆಲ್ಟ್ ವಾಪಸ್ ಪಡೆದ ವಿಶ್ವ ಟೇಕ್ವಾಂಡೋ!

ಪುಟಿನ್  ಬ್ಲ್ಯಾಕ್ ಬೆಲ್ಟ್ ವಾಪಸ್ ಪಡೆದ ವಿಶ್ವ ಟೇಕ್ವಾಂಡೋ!
ನವದೆಹಲಿ , ಮಂಗಳವಾರ, 1 ಮಾರ್ಚ್ 2022 (13:31 IST)
ಕೀವ್ : ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ದಿನದಿಂದ ದಿನಕ್ಕೆ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ.
ಈ ಯುದ್ಧದ ನಡುವೆ ಮಹತ್ವದ ಬೆಳವಣಿಗೆ ನಡೆದಿದ್ದು, ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರು ಪಡೆದುಕೊಂಡಿದ್ದ ಟೇಕ್ವಾಂಡೋ ಬ್ಲ್ಯಾಕ್ ಬೆಲ್ಟ್ನ್ನು ವಿಶ್ವ ಟೇಕ್ವಾಂಡೋ ಸಂಸ್ಥೆ ಹಿಂಪಡೆದುಕೊಂಡಿದೆ.

ಉಕ್ರೇನ್ನಲ್ಲಿ ಮುಗ್ಧ ಜೀವಗಳ ಮೇಲಿನ ಕ್ರೂರ ದಾಳಿಯನ್ನು ವಿಶ್ವ ಟೇಕ್ವಾಂಡೋ ಬಲವಾಗಿ ಖಂಡಿಸುತ್ತದೆ.  ವಿಶ್ವ ಟೇಕ್ವಾಂಡೋ ದೃಷ್ಟಿಕೋನದಲ್ಲಿ ವಿಜಯಕ್ಕಿಂತ ಶಾಂತಿ ಹೆಚ್ಚು ಅಮೂಲ್ಯವಾಗಿದೆ.

ಗೌರವ ಮತ್ತು ಸಹಿಷ್ಣುತೆ ಹೊಂದಿರುವ ವಿಶ್ವ ಟೇಕ್ವಾಂಡೋ ಮೌಲ್ಯಗಳಿಗೆ ಇದು ವಿರುದ್ಧವಾಗಿದೆ ಎಂದು ಟ್ವೀಟ್ ಮಾಡಲಾಗಿದೆ.

ಈ ಮೂಲಕವಾಗಿ ನವೆಂಬರ್ 2013ರಲ್ಲಿ ವಾಡ್ಲಿಮಿರ್ ಪುಟಿನ್ ಅವರಿಗೆ ನೀಡಲಾಗಿದ್ದ 9ನೇ ಬ್ಲ್ಯಾಕ್ ಬೆಲ್ಟ್ ಹಿಂಪಡೆಯಲು ನಿರ್ಧರಿಸಿದೆ ಎಂದು ವಿಶ್ವ ಟೇಕ್ವಾಂಡೋ ಆಡಳಿತ ಮಂಡಳಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆ ಮೂಲಕವಾಗಿ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ಬಿಕ್ಕಟ್ಟಿನಲ್ಲಿ ಸಿಲುಕಿರುವ ಉಕ್ರೇನ್!