Publish Date: Thu, 27 Jul 2017 (11:49 IST)
Updated Date: Thu, 27 Jul 2017 (11:52 IST)
ಕ್ಯಾಲಿಫೋರ್ನಿಯಾ: ಫೇಸ್‌ಬುಕ್ ಸ್ವಾಮ್ಯದ ವಾಟ್ಸ್ ಆ್ಯಪ್ ಹೊಸ ಮೊಬೈಲ್ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
ಮಧ್ಯಮ ಹಂತದ ವ್ಯವಹಾರಸ್ಥರಿಗೆ, ಕಂಪನಿಗಳಿಗೆ ಅನುಕೂಲವಾಗುವ ಆ್ಯಪ್ ಇದಾಗಿದ್ದು, ಇದರಿಂದ ವ್ಯವಹಾರಸ್ಥರು, ಕಂಪೆನಿಗಳು ಗ್ರಾಹಕರನ್ನು ಸಂಪರ್ಕಿಸಲು ಮತ್ತು ಗ್ರಾಹಕರು ವ್ಯಾಪಾರಿಗಳನ್ನು ಸಂಪರ್ಕಿಸಲು ಅನುಕೂಲವಾಗಲಿದೆ ಎಂದು ವಾಬೆಟಾಇನ್ಫೋ ಹೆಸರಿನ ಟ್ವಿಟರ್ ಖಾತೆ ವರದಿ ಮಾಡಿದೆ.
ವರದಿ ಪ್ರಕಾರ ಆ್ಯಪ್‌ನಲ್ಲಿ ನೋಂದಾವಣೆ ವೇಳೆ ವಾಟ್ಸ್‌ಆ್ಯಪ್ ಕಂಪೆನಿಗಳ ಪರಾಮರ್ಶೆ ನಡೆಸಲಿದೆ. ಆ್ಯಂಡ್ರಾಯಿಡ್ ಮತ್ತು ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ ಹೊಂದಿದ ಮೊಬೈಲ್‌ಗಳಲ್ಲಿ ನೂತನ ಆ್ಯಪ್ ಲಭ್ಯವಾಗಲಿದೆ.