Select Your Language

Notifications

webdunia
webdunia
webdunia
webdunia

17 ಭಾರತೀಯರ ಬಿಡುಗಡೆಗೆ ಇರಾನ್‌ನಿಂದ ಸಕಾರಾತ್ಮಕ ಸ್ಪಂದನೆ: ಜೈ ಶಂಕರ್

17 ಭಾರತೀಯರ ಬಿಡುಗಡೆಗೆ ಇರಾನ್‌ನಿಂದ ಸಕಾರಾತ್ಮಕ ಸ್ಪಂದನೆ: ಜೈ ಶಂಕರ್

Sampriya

ಬೆಂಗಳೂರು , ಸೋಮವಾರ, 15 ಏಪ್ರಿಲ್ 2024 (14:11 IST)
Photo Courtesy X
ಬೆಂಗಳೂರು: ಇರಾನ್ ವಶದಲ್ಲಿರುವ ಸರಕು ಹಡಗಿನಲ್ಲಿದ್ದ 17 ಭಾರತೀಯರನ್ನು ಬಿಡುಗಡೆ ಮಾಡುವ ಸಂಬಂಧ ಆ ದೇಶದ ವಿದೇಶಾಂಗ ಸಚಿವರ ಜತೆ ಮಾತನಾಡಿದ್ದು, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈ ಶಂಕರ್ ತಿಳಿಸಿದರು.

ನಮ್ಮ ಮಾತುಕತೆ ಬಳಿಕ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಮುಂದಿನ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಭಾರತದ ಆತಂಕ ಅರ್ಥವಾಗುತ್ತದೆ ಎಂದು ಇರಾನ್ ವಿದೇಶಾಂಗ ಸಚಿವರು ನನಗೆ ಹೇಳಿದರು. ಹೀಗಾಗಿ ಬಿಡುಗಡೆ ವಿಶ್ವಾಸವಿದೆ. ಭಾರತದ ಒಳಗೂ, ಹೊರಗೂ ಪ್ರತಿಯೊಬ್ಬ ಭಾರತೀಯನ ರಕ್ಷಣೆ ಮೋದಿಯವರ ಗ್ಯಾರಂಟಿ ಎಂದೂ ಜೈ ಶಂಕರ್ ಹೇಳಿದರು.

ಮಧ್ಯ ಪ್ರಾಚ್ಯ ಭಾಗದಲ್ಲಿ 90 ಲಕ್ಷ ಭಾರತೀಯರು ವಾಸವಿದ್ದಾರೆ. ಅವರ ರಕ್ಷಣೆಯೇ ನಮ್ಮ ಬದ್ಧತೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಮತ್ತು ಇರಾನ್ ಎರಡೂ ದೇಶಗಳ ಸಂಪರ್ಕದಲ್ಲಿ ಇದ್ದೇವೆ. ಸಂಘರ್ಷ ಬಿಟ್ಟು ಮಾತುಕತೆಗೆ ಸಲಹೆ ನೀಡಿದ್ದೇವೆ ಎಂದು ಜೈಶಂಕರ್ ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕುವೆಂಪು ಸಾಲು ಬದಲಾಯಿಸಿದ ಬಳಿಕ ಈಗ ಹಿಂದೂ ವಿರೋಧಿ ಬರಹ: ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಂಗಣ್ಣು