Select Your Language

Notifications

webdunia
webdunia
webdunia
webdunia

ಡಮಾಸ್ಕಸ್ ದಾಳಿಗೆ ಪ್ರತೀಕಾರ ತೀರಿಸಲು ಇರಾನ್‌ ಸಿದ್ಧತೆ: ಇಸ್ರೇಲ್, ಅಮೆರಿಕ ಹೈ ಅಲರ್ಟ್

ಡಮಾಸ್ಕಸ್ ದಾಳಿಗೆ ಪ್ರತೀಕಾರ ತೀರಿಸಲು ಇರಾನ್‌ ಸಿದ್ಧತೆ: ಇಸ್ರೇಲ್, ಅಮೆರಿಕ ಹೈ ಅಲರ್ಟ್

Sampriya

ನ್ಯೂಯಾರ್ಕ್ , ಶನಿವಾರ, 6 ಏಪ್ರಿಲ್ 2024 (14:21 IST)
Photo Courtesy X
ನ್ಯೂಯಾರ್ಕ್:  ಏಪ್ರಿಲ್ 2ರಂದು ನಡೆದ ಡಮಾಸ್ಕಸ್ ದಾಳಿಗೆ ಪ್ರತೀಕಾರ ತೀರಿಸಲು ಇರಾನ್ ಸಿದ್ಧತೆ ನಡೆಸಿದೆ. ಸಂಭವನೀಯ ಅಪಾಯದ ಬಗ್ಗೆ ಅಮೆರಿಕ ಹಾಗೂ ಇಸ್ರೇಲ್ ಹೈಅಲರ್ಟ್ ಘೋಷಿಸಿವೆ.

ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿ, 11 ಜನರನ್ನು ಹತ್ಯೆ ಮಾಡಿತ್ತು. ಇಸ್ರೇಲ್ ದಾಳಿಗೆ ಇರಾನ್ ಪ್ರತೀಕಾರ ತೆಗೆದುಕೊಳ್ಳುವ ಸಂಭವ ದಟ್ಟವಾಗಿದೆ. ಹೀಗಾಗಿ, ಮಧ್ಯಪ್ರಾಚ್ಯದಲ್ಲಿನ ತನ್ನ ಮಿಲಿಟರಿ ಹಾಗೂ ರಾಯಭಾರ ಅಧಿಕಾರಿಗಳಿಗೆ ಅಮೆರಿಕ ಹೈ ಅಲರ್ಟ್ ನೀಡಿದೆ.

ರಜೆ ಮೇಲೆ ಹೋಗಿರುವ ತನ್ನ ಸೇನಾಧಿಕಾರಿಗಳನ್ನು ಇಸ್ರೇಲ್‌ ವಾಪಸ್ ಕರೆಯಿಸಿಕೊಂಡಿದ್ದು ಎಲ್ಲ ಸೇನಾ ಸಿಬ್ಬಂದಿಗೂ ರಜೆಗಳನ್ನು ರದ್ದು ಮಾಡಿದೆ. ಜಿಪಿಎಸ್ ಸಿಗ್ನಲ್‌ಗಳನ್ನು ಸ್ಥಗಿತಗೊಳಿಸಿದೆ. ತನ್ನ ಎಲ್ಲ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸಿದ್ಧವಾಗಿರಲು ಸೂಚಿಸಲಾಗಿದೆ.

ಈಚೆಗೆ ನಡೆದ ದಾಳಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ನ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ರೆಜಾ ಜಹೇದಿ ಮತ್ತು ಇನ್ನೊಬ್ಬ ಉನ್ನತ ಶ್ರೇಣಿಯ ಅಧಿಕಾರಿ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ಹಾದಿ ಹಾಜಿ ರಹೀಮಿ ಹಾಗೂ ಗಾರ್ಡ್‌ನ 7 ಸದಸ್ಯರು ಮೃತರಾಗಿದ್ದರು. ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಮೃತರ ಅಂತ್ಯಕ್ರಿಯೆ ಶುಕ್ರವಾರ ಟೆಹರಾನ್‌ನಲ್ಲಿ ನಡೆಯಿತು. ಈ ವೇಳೆ ಇರಾನ್ ಸೇನೆಯ ಉನ್ನತಾಧಿಕಾರಿಗಳು ಪ್ರತೀಕಾರದ ಶಪಥ ಮಾಡಿದ್ದಾರೆ. ಈ ವಿಚಾರದಲ್ಲಿ ಅಮೆರಿಕ ಸುಮ್ಮನಿರುವುದು ಉತ್ತಮ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಫೋಟೋಗಾಗಿ ಕೋರ್ಟ್ ಮೆಟ್ಟಿಲೇರಿದ ಈಶ್ವರಪ್ಪ