ಚೀನಾದ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಷನ್ ಸರ್ಕಾರದ ಕ್ರಮಗಳನ್ನ ಜಾರಿಗೊಳಿಸುವ ರಾಷ್ಟ್ರೀಯ ಸಂಸ್ಥೆಯಾಗಿದೆ. ಅದರಂತೆ ಮಹಿಳೆಯರಿಗೆ ಮದುವೆಯಾಗಲು ಮತ್ತು ಮಕ್ಕಳು ಹೊಂದುವುದನ್ನ ಪ್ರೋತ್ಸಾಹಿಸಲು ಹೊಸ ಯೋಜನೆಗಳನ್ನ ಪ್ರಾರಂಭಿಸುತ್ತಿದೆ ಎಂದು ಹೇಳಿದೆ.
ಜೊತೆಗೆ ಹೆಣ್ಣುಮಕ್ಕಳು ಸರಿಯಾದ ವಯಸ್ಸಿನಲ್ಲಿ ಮದುವೆಯಾಗಬೇಕು, ಮಕ್ಕಳನ್ನು ಹೊಂದಬೇಕು. ಜೊತೆಗೆ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ಪೋಷಕರು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಕಳೆದ ವರ್ಷ ಬೀಜಿಂಗ್ ಸೇರಿದಂತೆ 20 ನಗರಗಳಲ್ಲಿ ಸಂಘವು ಈಗಾಗಲೇ ಯೋಜನೆಯನ್ನ ಪ್ರಾರಂಭಿಸಿದೆ. ಜೊತೆಗೆ ಯುವಜನರಿಗೆ ಮದುವೆ ಮತ್ತು ಹೆರಿಗೆಯ ಪರಿಕಲ್ಪನೆಯ ಬಗ್ಗೆ ಹೆಚ್ಚು ಮಾರ್ಗದರ್ಶನ ನೀಡುವಂತೆ ತಿಳಿಸಿದೆ.