Select Your Language

Notifications

webdunia
webdunia
webdunia
webdunia

ಸಂಪೂರ್ಣ ಕೋವಿಡ್ ಲಸಿಕೆ ಪಡೆದ ಪ್ರಯಾಣಿಕರಿಗೆ ನಿರ್ಬಂಧ ಸಡಿಲಿಕೆ ಮಾಡಿದ ಯುಎಸ್

ಸಂಪೂರ್ಣ ಕೋವಿಡ್ ಲಸಿಕೆ ಪಡೆದ ಪ್ರಯಾಣಿಕರಿಗೆ ನಿರ್ಬಂಧ ಸಡಿಲಿಕೆ ಮಾಡಿದ ಯುಎಸ್
ವಾಷಿಂಗ್ಟನ್ , ಮಂಗಳವಾರ, 21 ಸೆಪ್ಟಂಬರ್ 2021 (08:32 IST)
ವಾಷಿಂಗ್ಟನ್, ಸೆ 21 : ಕೊರೊನಾ ವೈರಸ್ ಸೋಂಕು ವಿರುದ್ದ ಸಂಪೂರ್ಣ ಲಸಿಕೆಯನ್ನು ಪಡೆದವರಿಗೆ ಎಲ್ಲಾ ವಿಮಾನ ಪ್ರಯಾಣಿಕರಿಗೆ ನಿರ್ಬಂಧವನ್ನು ನವೆಂಬರ್ ತಿಂಗಳಿನಿಂದ ಸಡಿಲಿಕೆ ಮಾಡಲಾಗುವುದು ಎಂದು ಸೋಮವಾರ ಅಮೆರಿಕ ಘೋಷಣೆ ಮಾಡಿದೆ.

ಪರೀಕ್ಷೆ ಮತ್ತು ಸಂಪರ್ಕ ಪತ್ತೆಹಚ್ಚುವಿಕೆಗೆಯ ಮೂಲಕ ಸಂಪೂರ್ಣ ಲಸಿಕೆ ಪಡೆದ ಜನರಿಗೆ ಅಮೆರಿಕ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಯುಎಸ್ ಅಧ್ಯಕ್ಷ ಜೋ ಬೈಡೆನ್‌ರ ಕೊರೊನಾವೈರಸ್ ಬಗೆಗಿನ ವಿಚಾರಗಳ ನಿರ್ವಾಹಕ ಜೆಫ್ರಿ ಜಿಯೆಂಟ್ಸ್ ವರದಿಗಾರರಿಗೆ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ಈ ಹೊಸ ಮಾರ್ಗಸೂಚಿಯು ನವೆಂಬರ್ನಿಂದ ಜಾರಿಗೆ ಬರಲಿದೆ," ಎಂದು ತಿಳಿಸಿದ್ದಾರೆ. ಕೊರೊನಾ ವೈರಸ್ ಸೋಂಕು ಕಾರಣದಿಂದಾಗಿ ಕಳೆದ 18 ತಿಂಗಳುಗಳ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಹೇರಿದ್ದ ಕೋವಿಡ್ ಪ್ರಯಾಣ ನಿರ್ಬಂಧವನ್ನು ಈ ಮೂಲಕ ಸಡಿಲಿಕೆ ಮಾಡಲಾಗುತ್ತದೆ. ಇದು ಕೋವಿಡ್ ನಿರ್ಬಂಧಗಳ ವಿಚಾರದಲ್ಲಿ ಜೋ ಬೈಡೆನ್ ಕೈಗೊಂಡ ಮಹತ್ವದ ನಿರ್ಧಾರವಾಗಿದೆ. ರಾಜತಾಂತ್ರಿಕ ಸಂಬಂಧಗಳ ಬಿಕ್ಕಟ್ಟಿನ ಹಿನ್ನೆಲೆ ಯುರೋಪಿಯನ್ ಮಿತ್ರರಾಷ್ಟ್ರಗಳು ಮುಂದಿಟ್ಟಿದ ನಿಯಮ ಸಡಿಲಿಕೆ ಬೇಡಿಕೆಗೆ ಈ ಮೂಲಕ ಜೋ ಬೈಡೆನ್ ಉತ್ತರ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

5-11 ವರ್ಷದ ಮಕ್ಕಳಿಗೆ ʼಫೈಜರ್ ಲಸಿಕೆʼ ಸುರಕ್ಷಿತ