Publish Date: Tue, 07 Apr 2026 (14:18 IST)
Updated Date: Tue, 07 Apr 2026 (14:23 IST)
ನ್ಯೂಯಾರ್ಕ್: ಪನಾಮ ಕಾಲುವೆಯ ಸೇತುವೆಯಲ್ಲಿ ಮೂರು ಇಂಧನ ಟ್ಯಾಂಕರ್ ಗಳು ಸ್ಪೋಟಗೊಂಡಿದ್ದು ಈ ಭೀಕರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪನಾಮ ಕಾಲುವೆಯ ಪೆಸಿಫಿಕ್ ಪ್ರವೇಶದ್ವಾರದಲ್ಲಿರುವ ಬ್ರಿಡ್ಜ್ ಆಫ್ ದಿ ಅಮೆರಿಕಾಸ್ ಬಳಿ ಇಂಧನ ಟ್ಯಾಂಕರ್ ಗಳು ಸ್ಪೋಟಗೊಂಡಿವೆ. ಈ ವೇಳೆ ಸೇತುವೆ ಮೇಲೆ ಸಾಕಷ್ಟು ವಾಹನಗಳು ಓಡಾಡುತ್ತಿದ್ದವು. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ ಮುಗಿಲೆತ್ತರಕ್ಕೆ ಬೆಂಕಿಯ ಜ್ವಾಲೆ ಹರಡಿತ್ತು.
ಸ್ಪೋಟದ ತೀವ್ರತೆ ಸೇತುವೆ ಮೇಲೆ ಓಡಾಡುತ್ತಿದ್ದ ಕೆಲವು ಕಾರುಗಳೂ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲಗೆ ಕಂಡು ವಾಹನಗಳು ದಿಕ್ಕಾಪಾಲಾಗಿವೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು ಓರ್ವ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಸೇತುವೆಯ ಅಕ್ಕಪಕ್ಕದಲ್ಲಿದ್ದ ವಾಹನಗಳಿಗೂ ಬೆಂಕಿ ತಗುಲಿದೆ ಎಂದು ವರದಿಯಾಗಿದೆ. ಅಗ್ನಿ ಶಾಮಕ ದಳ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಸದ್ಯಕ್ಕೆ ಸೇತುವೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.