Select Your Language

Notifications

webdunia
webdunia
webdunia
webdunia

‘ಅಲ್ಲಾಹ್ ಬಿಟ್ಟರೆ ನೀವೇ ನಮ್ಮ ಕೊನೆಯ ಭರವಸೆ’

‘ಅಲ್ಲಾಹ್ ಬಿಟ್ಟರೆ ನೀವೇ ನಮ್ಮ ಕೊನೆಯ ಭರವಸೆ’
ನವದೆಹಲಿ , ಭಾನುವಾರ, 26 ನವೆಂಬರ್ 2017 (12:27 IST)
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಗಾಗ ಪಾಕಿಸ್ತಾನಿ ನಾಗರಿಕರಿಗೂ ನೆರವಾಗಿ ಮಾನವೀಯತೆ ಮೆರೆಯುತ್ತಾರೆ. ಅದೇ ಭರವಸೆಯಿಂದ ಪಾಕ್ ಬಾಲಕನೊಬ್ಬ ಸುಷ್ಮಾಗೆ ಮೊರೆಯಿಟ್ಟಿದ್ದಾನೆ.
 

ತನ್ನ ಸಂಬಂಧಿಗೆ ಭಾರತದಲ್ಲಿ ಚಿಕಿತ್ಸೆ ಕೊಡಿಸಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಮೊರೆಯಿಟ್ಟ ಬಾಲಕ ‘ಅಲ್ಲಾಹ್ ಬಿಟ್ಟರೆ ನೀವೇ ನಮ್ಮ ಕೊನೆಯ ಭರವಸೆ’ ಎಂದು ಕಣ್ಣೀರಿಟಿದ್ದ. ಬಾಲಕನ ಕಣ್ಣೀರಿಗೆ ಕರಗಿದ ಸುಷ್ಮಾ ನಾಲ್ವರು ಪಾಕ್ ಪ್ರಜೆಗಳಿಗೆ ವೈದ್ಯಕೀಯ ವೀಸಾ ನೀಡಿದ್ದಾರೆ.

ಇವರಿಗೆ ಪ್ರತಿಕ್ರಿಯಿಸಿ ಸುಷ್ಮಾ ‘ಭಾರತ ಯಾವತ್ತೂ ನಿಮ್ಮ ಆಶಾಕಿರಣಕ್ಕೆ ತಣ್ಣೀರೆರಚದು. ನಿಮಗೆ ವೈದ್ಯಕೀಯ ವೀಸಾ ನೀಡಲಾಗುವುದು’ ಎಂದಿದ್ದಾರೆ. ಸಚಿವೆ ಸುಷ್ಮಾ ಹೀಗೇ ಅನೇಕ ಬಾರಿ ಟ್ವೀಟ್ ಮೂಲಕವೂ ಸಮಸ್ಯೆಗೆ ಪರಿಹಾರ ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯವರ ಟೀಕೆಗೆಲ್ಲಾ ಉತ್ತರಿಸಲು ಆಗಲ್ಲಾರೀ.. ಸಿಎಂ ಸಿದ್ದರಾಮಯ್ಯ