Publish Date: Wed, 26 Jul 2017 (10:32 IST)
Updated Date: Wed, 26 Jul 2017 (10:36 IST)
ನವದೆಹಲಿ: ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅವರು ಇದೀಗ ಮಾಡಿರುವ ಟ್ವೀಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಪಾಕಿಸ್ತಾನದಿಂದ ಬಂದ ವೀಸಾ ಅರ್ಜಿಗೆ ಪ್ರತಿಕ್ರಿಯೆಗಾಗಿ ಅವರು ಒಂದು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ‘ಪಾಕಿಸ್ತಾನದಲ್ಲಿರುವ ಭಾರತದ ಹೆಣ್ಣು ಮಕ್ಕಳಿಗೆ ಮತ್ತು ಪಾಕಿಸ್ತಾನದ ಸೊಸೆಯಂದಿರಿಗೆ ಸ್ವಾಗತ’ ಎಂದು ಸುಷ್ಮಾ ಟ್ವೀಟ್ ಮಾಡಿರುವುದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ನಿನ್ನೆಯಷ್ಟೇ ವಿದೇಶೀ ಪತ್ರಿಕೆಯೊಂದು ಭಾರತೀಯ ವಿದೇಶಾಂಗ ಸಚಿವೆಯನ್ನು ‘ಜನರ ಪ್ರೀತಿಪೂರ್ವಕ ಸಚಿವೆ’ ಎಂದು ಕರೆದಿತ್ತು. ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಮಗುವಿನ ಚಿಕಿತ್ಸೆಗಾಗಿ ಭಾರತಕ್ಕೆ ಬರಲು ವೀಸಾ ನೀಡಿದ್ದ ಸುಷ್ಮಾ ನಡೆಯೂ ಮೆಚ್ಚುಗೆಗೆ ಕಾರಣವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ