ನವದೆಹಲಿ: ನಕಲಿ ಗುರುತು ಒತ್ರ ಹೊಂದಿದ್ದ ಆರೋಪದಲ್ಲಿ ಪಾಕಿಸ್ತಾನದಿಂದ ಗಡಿಪಾರಾಗಿದ್ದ ಶರ್ಬತ್ ಗುಲಾ ಚಿಕಿತ್ಸೆಗಾಗಿ ಶೀಘ್ರ ಭಾರತಕ್ಕೆ ಆಗಮಿಸಲಿದ್ದಾರೆ.
ನ್ಯಾಶನಲ್ ಜಿಯಾಗ್ರಫಿಕ್ ನಿಯತಕಾಲಿಕೆಯಲ್ಲಿ ಕಾಣುಸಿಕೊಳ್ಳುವ ಮೂಲಕ ಅಪ್ಘನ್ ಗರ್ಲ್ ಎಂದು ಗುಲಾ ಖ್ಯಾತಿ ಪಡೆದಿದ್ದರು. ಅವರು ನಕಲಿ ಗುರುತಿನ ಪತ್ರ ಹೊಂದಿದ್ದಾರೆ ಎಂದು ಪಾಕಿಸ್ತಾನ ಇತ್ತೀಚೆಗೆ ಅವರನ್ನು ಗಡಿಪಾರು ಮಾಡಿತ್ತು. ತನ್ನ ತವರಿಗೆ ಹೋಗಿರುವ ಅವರು ಹೆಪಟೈಟಿಸ್ ಸಿ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಭಾರತ ಮುಂದೆ ಬಂದಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತಯಾರಿ ನಡೆಸಲಾಗಿದೆ. ಸಂಬಂಧಿಸಿ ಗುಲಾ ಅವರು ಶೀಘ್ರ ಭಾರತಕ್ಕೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.
ನಲವತ್ತು ವರ್ಷದ ಗುಲಾ ಅವರಿಗೆ ಭಾರತ ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದು, ಅಪ್ಘನಿಸ್ತಾನದ ರಾಯಭಾರಿ ಶಹೀದಾ ಅಬ್ದಲಿ ಸಂತಸದ ಜೊತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ