ಕೆಎಲ್ಇ ಸಂಸ್ಥೆಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ಕನ್ನಡದಲ್ಲಿಯೇ ಭಾಷಣವನ್ನು ಆರಂಭಿಸಿ ನೆರೆದವರ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ಬೆಳಗಾವಿಯ ಬಂಧು ಭಗಿನಿಯರೆ ನಿಮಗೆಲ್ಲಾ ನನ್ನ ವಂದನೆಗಳು ಎಂದು ಹೇಳಿದರು.
ಉತ್ತಮ ಶಿಕ್ಷಕರು ಹಲವರಿರುತ್ತಾರೆ. ಕೆಎಲ್‌ಇ ಸಂಸ್ಥೆಯ ಸಪ್ತ ಖುಷಿಗಳು ಅವರ ಸಾಲಿಗೆ ಸೇರುತ್ತಾರೆ. ನೂರು ವರ್ಷಗಳ ಕಾಲ ಶಿಕ್ಷಣ ಸಂಸ್ಥೆ ನಡೆಸುವುದು ಸುಲಭದ ಮಾತಲ್ಲ. ಲೋಕಮಾನ್ಯ ತಿಲಕ್, ಕ್ರಾಂತಿಯೋಗಿ ಬಸವಣ್ಣ ಅವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.
ಉತ್ತಮ ಶಿಕ್ಷಕರು ಹಲವರಿರುತ್ತಾರೆ. ಆದರೆ ಅಮರ ಶಿಕ್ಷಕರು ಲೆಕ್ಕಕ್ಕೆ ಸಿಗುವಷ್ಟಿರುತ್ತಾರೆ. ಕೆಎಲ್ಇ ಸಂಸ್ಥೆಯ ಸಪ್ತ ಋಷಿಗಳು ಇಂತವರ ಸಾಲಿಗೆ ಸೇರುತ್ತಾರೆ. ನೂರು ವರ್ಷಗಳ ಕಾಲ ಶಿಕ್ಷಣ ಸಂಸ್ಥೆಯನ್ನು ನಡೆಸುವುದು ಸಾಮಾನ್ಯ ಮಾತಲ್ಲ. ಲೋಕಮಾನ್ಯ ತಿಲಕ್, ಕ್ರಾಂತಿಯೋಗಿ ಬಸವಣ್ಣ ಮತ್ತು ಲೋಕಮಾನ್ಯ ತಿಲಕ್ ಅವರ ಸ್ಪೂರ್ತಿಯಿಂದ ಪ್ರಾರಂಭವಾದ ವಿದ್ಯಾ ಸಂಸ್ಥೆ ಇದು. ಇಂದು ದೇಶದ ಮೂಲೆಮೂಲೆಯಲ್ಲಿಯೂ ಈ ಸಂಸ್ಥೆಯ ವಿದ್ಯಾರ್ಥಿಗಳಿದ್ದಾರೆ. ರಾಷ್ಟ್ರದ ವಿಕಾಸದಲ್ಲಿ ಕೆಎಲ್ಇ ಕೊಡುಗೆ ಅಪಾರ, ಈ ಸಂಸ್ಥೆಯಿಂದ ಮತ್ತಷ್ಟು ಕೊಡುಗೆಗಳು ಬರಬೇಕಿದೆ ಎಂದಿದ್ದಾರೆ ಮೋದಿ.
ದುಬಾರಿ ನೋಟಿನ ನಿಷೇಧದ ಬಗ್ಗೆ ಪ್ರಸ್ತಾಪಿಸಿದ ಅವರು, ನನ್ನದು ತಪ್ಪಾಗಿದ್ದರೆ ಶಿಕ್ಷಿಸಿ. ನಿಮ್ಮ ಕಷ್ಟ ನನಗರ್ಥವಾಗುತ್ತಿದೆ. ವಂಚಕರಿಗೆ ಶಿಕ್ಷೆ ಕೊಡುವ ನಿಟ್ಟಿನಲ್ಲಿ ಹೊಸ ನೋಟಿನ ಗೋಪ್ಯತೆ ಕಾಯುವುದು ನನಗೆ ಅನಿವಾರ್ಯವಾಗಿತ್ತು. ದೇಶ ಇಂದು ಕಷ್ಟವನ್ನು ಅನುಭವಿಸುತ್ತಿದೆ. ಆದರೆ ಇದರ ಪರಿಣಾಮ ದೇಶ ಬಹಳಷ್ಟನ್ನು ಪಡೆಯಲಿದೆ. ನವೆಂಬರ್ 8ರ ರಾತ್ರಿ ಬಡವರು ನಿಶ್ಚಿಂತೆಯಿಂದ ಮಲಗಿದ್ದರು. ಆದರೆ ಭ್ರಷ್ಟರ ನಿದ್ರೆ ಅಂದಿಗೆ ಮುಗಿದು ಹೋಯಿತು. ನಿದ್ರೆ ಮಾತ್ರೆ ಕೊಳ್ಳಲು ಹೋದರೆ ಅದು ಕೂಡ ಅವರಿಗೆ ಸಿಗಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
70 ವರ್ಷಗಳಿಂದ ದೇಶವನ್ನು ಲೂಟಿ ಮಾಡಲಾಗಿದೆ. ಇಷ್ಟು ದೀರ್ಘಾವಧಿಯಿಂದ ಬೇರೂರಿರುವ ಭ್ರಷ್ಟಾಚಾರವನ್ನು ಸ್ವಚ್ಛಗೊಳಿಸಲು ನನಗೆ ಕನಿಷ್ಠ 50 ದಿನಗಳಾದರೂ ಬೇಡವೇ? ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ, ಪ್ರಾಮಾಣಿಕತೆ ತರಲು ನಿಮ್ಮ ಸಮ್ಮತಿ ಇದ್ದರೆ ಕೈ ಎತ್ತಿ ಸಮ್ಮತಿ ಸೂಚಿಸಿ ಎಂದು ಮೋದಿ ಹೇಳುತ್ತಿದ್ದಂತೆ ಅವರಿಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಅಲ್ಲಿದ್ದ ಅಪಾರ ಸಂಖ್ಯೆಯ ಜನರು, ವಿದ್ಯಾರ್ಥಿಗಳು ಅಷ್ಟೇ ಅಲ್ಲದೇ ಪತ್ರಕರ್ತರೂ ಸಹ ಎದ್ದು ನಿಂತು ಕರತಾಡನ ಮಾಡಿದರು. ಅದನ್ನು ಕಂಡ ಪ್ರಧಾನಿ ಎಂದೂ ನಿಲ್ಲದ ಪತ್ರಕರ್ತರು ಕೂಡ ಇಂದು ಎದ್ದು ನಿಂತಿದ್ದಾರೆ. ಅವರಿಗೆ ನನ್ನ ವಂದನೆಗಳು ಎಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ