ಉತ್ತರ-ಮಧ್ಯ ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟಗೊಂಡು 70 ಜನರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಶನಿವಾರ ಮುಂಜಾನೆ ನೈಜರ್ ರಾಜ್ಯದ ಸುಲೇಜಾ ಪ್ರದೇಶದ ಬಳಿ ವ್ಯಕ್ತಿಗಳು ಜನರೇಟರ್ ಬಳಸಿ ಒಂದು ಟ್ಯಾಂಕರ್‌ನಿಂದ ಮತ್ತೊಂದು ಟ್ರಕ್‌ಗೆ ಗ್ಯಾಸೋಲಿನ್ ಅನ್ನು ವರ್ಗಾಯಿಸಲು ಪ್ರಯತ್ನಿಸಿದ ವೇಳೆ ಸ್ಫೋಟ ಸಂಭವಿಸಿದೆ.
ಜನರೇಟರ್ ಬಳಸಿ ಒಂದು ಟ್ಯಾಂಕರ್‌ನಿಂದ ಮತ್ತೊಂದು ಟ್ರಕ್‌ಗೆ ಗ್ಯಾಸೋಲಿನ್ ಅನ್ನು ವರ್ಗಾಯಿಸಲು ವ್ಯಕ್ತಿಗಳು ಪ್ರಯತ್ನಿಸಿದ ನಂತರ ನೈಜರ್ ರಾಜ್ಯದ ಸುಲೇಜಾ ಪ್ರದೇಶದ ಬಳಿ ಶನಿವಾರ ಮುಂಜಾನೆ ಟ್ಯಾಂಕರ್ ಸ್ಫೋಟದ ದುರಂತ ಘಟನೆ ನಡೆದಿದೆ.
ಸರಕು ಸಾಗಣೆಗೆ ಸಮರ್ಥವಾದ ರೈಲ್ವೇ ವ್ಯವಸ್ಥೆಯ ಕೊರತೆಯಿಂದಾಗಿ, ಆಫ್ರಿಕಾದ ಅತ್ಯಂತ ಜನನಿಬಿಡ ರಾಷ್ಟ್ರವಾದ ನೈಜೀರಿಯಾದ ಪ್ರಮುಖ ರಸ್ತೆಗಳಲ್ಲಿ ಮಾರಣಾಂತಿಕ ಟ್ರಕ್ ಅಪಘಾತಗಳು ಆಗಾಗ್ಗೆ ಸಂಭವಿಸುತ್ತವೆ.
ಸೆಪ್ಟೆಂಬರ್‌ನಲ್ಲಿ, ನೈಜರ್ ರಾಜ್ಯದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಮತ್ತು ಜಾನುವಾರುಗಳನ್ನು ಸಾಗಿಸುತ್ತಿದ್ದ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ಕನಿಷ್ಠ 48 ಜನರು ಸಾವನ್ನಪ್ಪಿದರು.<>