ಕಠ್ಮಂಡು: ಭಾರತದ ಜತೆಗೆ ಗಡಿ ಕಿರಿಕ್ ಮಾಡಿಕೊಂಡಿರುವ ನೇಪಾಳ ಈಗ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದು, ವಿವಾದಿತ ನಕ್ಷೆಯನ್ನು ಅಧಿಕೃತವೆಂದು ಗೂಗಲ್ ಮತ್ತು ವಿಶ್ವಸಂಸ್ಥೆಗೂ ಕಳುಹಿಸಿಕೊಡಲು ತೀರ್ಮಾನಿಸಿದೆ.
ವಿವಾದಿತ ಪ್ರದೇಶವಾದ ಕಾಲಪಾನಿ, ಲಿಂಪಿಯಾಧುರ ಮತ್ತು ಲಿಪು ಲೇಖ್ ಪ್ರದೇಶವನ್ನು ತನ್ನದೆಂದು ವಾದಿಸುತ್ತಿರುವ ನೇಪಾಳ ಹೊಸ ನಕ್ಷೆಗೆ ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಅನುಮೋದನೆ ಪಡೆದಿತ್ತು.
ಇದೀಗ ಹೊಸ ನಕ್ಷೆಯನ್ನು ಮುದ್ರಿಸಿ ವಿಶ್ವಸಂಸ್ಥೆ ಮತ್ತು ಗೂಗಲ್ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಈ ವಿವಾದಿತ ನಕ್ಷೆಯನ್ನೇ ಅಧಿಕೃತವೆಂದು ಕಳುಹಿಸಲು ನಿರ್ಧರಿಸಿದೆ.