ಚೀನಾಕ್ಕೆ ತಿರುಗೇಟು ನೀಡಲು ಕಲರ್ ಟಿವಿ ಮೇಲೆ ನಿರ್ಬಂಧ ಹೇರಿದ ಭಾರತ

ಶನಿವಾರ, 1 ಆಗಸ್ಟ್ 2020 (11:42 IST)
ನವೆದಹಲಿ: ಗಡಿಯಲ್ಲಿ ತಕರಾರು ತೆಗೆದ ಚೀನಾ ವಿರುದ್ಧ ಆರ್ಥಿಕ ಸಮರಕ್ಕೆ ಮುಂದಾಗಿರುವ ಭಾರತ ಆಪ್ ಗಳ ನಿಷೇಧದ ಬಳಿಕ ಇಲೆಕ್ಟ್ರಾನಿಕ್ ಉತ್ಪನ್ನಗಳ ಆಮದಿಗೆ ನಿರ್ಬಂಧ ವಿಧಿಸಲು ಮುಂದಾಗಿದೆ.


ಚೀನಾಕ್ಕೆ ತಿರುಗೇಟು ನೀಡಲು ಭಾರತಕ್ಕೆ ಆಮದಾಗುವ ಕಲರ್ ಟಿವಿಗಳ ಮೇಲೆ ನಿರ್ಬಂಧ ವಿಧಿಸಲು ಕೇಂದ್ರ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಇನ್ನು ಮುಂದೆ ಕಲರ್ ಟಿವಿ ಆಮದು ನೀತಿಯನ್ನು ಬದಲಾಯಿಸಿದ್ದು, ನಿರ್ಬಂಧಿತ ಪಟ್ಟಿಗೆ ಸೇರಿಸಿದೆ. ಇದರಿಂದ ಚೀನಾ ಮೂಲದ ಉತ್ಪನ್ನಗಳು ಭಾರತದ ಮಾರುಕಟ್ಟೆ ಪ್ರವೇಶಿಸುವುದು ಕಷ್ಟವಾಗಲಿದೆ. ಇದರ ಬದಲಾಗಿ ದೇಶೀ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ನಿರ್ಧರಿಸಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 22 ವರ್ಷದ ಯುವಕ ಆಮೇಲೆ ಮಾಡಿದ್ದೇನು?