ಸಿಂಧ್ ಪ್ರಾಂತ್ಯದ ಶಹಬಾಜ್ ಕಲಂಧರ್ ದರ್ಗಾದಲ್ಲಿ ಗುರುವಾರ ರಾತ್ರಿ ಪ್ರಬಲ ಬಾಂಬ್ ಸ್ಪೋಟವಾಗಿ 100ಕ್ಕೂ ಹೆಚ್ಚು ಜನರು ದುರ್ಮರನ್ನಪ್ಪಿದ್ದಾರೆ.125ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದ್ದು ಅವರನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.
ಕೃತ್ಯ ನಡೆದ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಯ್ತು. ಆದರೂ ಸಾವಿನ ಸಂಖ್ಯೆ 100ನ್ನು ಮೀರಿದೆ.
ದರ್ಗಾದ ಗೋಲ್ಡನ್ ಗೇಟ್ ಮೂಲಕ ಒಳ ಪ್ರವೇಶಿಸಿದ ಮಾನವ ಬಾಂಬರ್ ಸೂಫಿ ಸಮುದಾಯದವರ ಧಾರ್ಮಿ ನೃತ್ಯ ಧಮಾಲ್ ನಡೆಯುತ್ತಿದ್ದ ಸ್ಥಳದಲ್ಲಿ ಮೊದಲು ಗ್ರೆನೇಡ್ ಎಸೆದಿದ್ದಾನೆ. ಆದರೆ ಅದು ಸ್ಪೋಟಗೊಳ್ಳಲು ವಿಫಲಾವಾಗಿದೆ. ಬಳಿಕ ಆತ ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದಾನೆ.
ಸೆಹವಾನ್ ಪಟ್ಟಣದ ಸುತ್ತುಮುತ್ತಲಿನ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಘಟನೆಯಿಂದ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿದ್ದು,ಸ್ಫೋಟದ ನಂತರ ಸ್ಥಳದಲ್ಲಿ ಕಾಲ್ತುಳಿಯ ಕೂಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಇಸ್ಲಾಮಿಕ್ ಸ್ಟೇಟ್ ಗ್ರುಪ್ ಈ ದಾಳಿಯ ಹೊಣೆ ಹೊತ್ತಿದೆ.