Select Your Language

Notifications

webdunia
webdunia
webdunia
Sunday, 6 April 2025
webdunia

ಸಂಗೀತದ ನೆಪ : ಆತ ಮಾಡುತ್ತಿದ್ದ ಕೆಲಸ ನೋಡುದ್ರೆ ಶಾಕ್ ಆಗ್ತೀರ!

ಅಶ್ಲೀಲ ಫೋಟೋ
ರೋಮ್ , ಭಾನುವಾರ, 19 ಡಿಸೆಂಬರ್ 2021 (08:39 IST)
ರೋಮ್ : 20 ವರ್ಷಗಳಿಂದ ಮಕ್ಕಳ ಅಶ್ಲೀಲ ಫೋಟೋ ಮತ್ತು ವೀಡಿಯೋಗಳನ್ನು ಚಿತ್ರಿಸುತ್ತಿದ್ದ 49 ವರ್ಷದ ಸಂಗೀತಗಾರ ಇಂದು ಪೋಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ವಯಸ್ಕರೊಂದಿಗೆ ಮಕ್ಕಳು ಲೈಂಗಿಕ ಕ್ರಿಯೆಗಳಲ್ಲಿ ತೊಡಗಿಕೊಳ್ಳುವ ಲಕ್ಷಗಳಷ್ಟು ಫೋಟೋ ಮತ್ತು ವೀಡಿಯೋಗಳನ್ನು 49 ವರ್ಷದ ಸಂಗೀತಗಾರ ಹೊಂದಿದ್ದು, ಆತನನ್ನು ಇಟಾಲಿಯನ್ ಪೊಲೀಸರು ಇಂದು ಬಂಧಿಸಿದ್ದಾರೆ.

ಇಟಲಿಯ ಮಾರ್ಚೆ ಪ್ರದೇಶದ ಕರಾವಳಿ ನಗರವಾದ ಅಂಕೋನಾದಲ್ಲಿ ಸಂಗೀತಗಾರನಾಗಿದ್ದ ವ್ಯಕ್ತಿ ಸುಮಾರು 20 ವರ್ಷಗಳಿಂದ ಮಕ್ಕಳನ್ನು ಬಳಸಿಕೊಂಡು ಅಶ್ಲೀಲ ವೀಡಿಯೋ ಮತ್ತು ಫೋಟೋಗಳ್ನು ಚಿತ್ರಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಅವನ ಮನೆಯ ಮೇಲೆ ದಾಳಿ ಮಾಡಿದ್ದಾರೆ.

ಅದು ಅಲ್ಲದೇ ಈ ಫೈಲ್ ಗಳಿಗೆ ಮಕ್ಕಳ ವಯಸ್ಸಿನ ಪ್ರಕಾರ ಹೆಸರನ್ನು ಕೊಟ್ಟು ವಿಂಗಡಿಸಲಾಗಿದ್ದು, ವಿಭಿನ್ನ ಫೋಲ್ಡರ್ ಗಳನ್ನು ಮಾಡಲಾಗಿದೆ. ಇದರಲ್ಲಿ ಅಪ್ರಾಪ್ತ ಮಕ್ಕಳ ಫೋಟೋ ಮತ್ತು ವೀಡಿಯೋಗಳನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದರು. 

ಈತ ಅಪ್ರಾಪ್ತ ಮಕ್ಕಳಿಗೆ ಸಂಗೀತವನ್ನು ಹೇಳಿಕೊಂಡುತ್ತಿದ್ದು, ಮಕ್ಕಳನ್ನು ಬಳಸಿಕೊಂಡು ಈ ರೀತಿಯ ಕೃತ್ಯವನ್ನು ಮಾಡುತ್ತಿದ್ದಾನೆ. ಆದರೆ ಈ ಕುರಿತು ಈತನ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದು ಪೊಲೀಸರು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಾವಿ ಗಲಭೆ:27 ಜನರಿಗೆ ನ್ಯಾಯಾಂಗ ಬಂಧನ