Webdunia - Bharat's app for daily news and videos

Install App

ಬೈಡನ್‌ ಪಡೆದ ಉಡುಗೊರೆಗಳಲ್ಲಿ ಮೋದಿ ಗಿಫ್ಟ್‌ ಅತ್ಯಂತ ದುಬಾರಿ: ಹಾಗಾದರೆ ಪ್ರಧಾನಿ ನೀಡಿದ್ದೇನು

Sampriya
ಭಾನುವಾರ, 5 ಜನವರಿ 2025 (12:40 IST)
Photo Courtesy X
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ ದಂಪತಿಯು 2023 ರಲ್ಲಿ  ವಿದೇಶಿ ನಾಯಕರಿಂದ ಪಡೆದ ಅಸಂಖ್ಯಾತ ಉಡುಗೊರೆಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ವಜ್ರದ ಗಿಫ್ಟ್‌ ಅತ್ಯಂತ ದುಬಾರಿಯಾದುದು ಎಂದು ಶ್ವೇತಭವನ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಜ್ರದ ಮೌಲ್ಯವು ಸುಮಾರು ₹ 17 ಲಕ್ಷಕ್ಕೂ ಅಧಿಕವಾಗಿದ್ದು, ಬೈಡನ್‌ ಅಧಿಕಾರದಿಂದ ನಿರ್ಗಮಿಸಿದ ನಂತರ ಈ ವಜ್ರವನ್ನು ಅಮೆರಿಕ ರಾಷ್ಟ್ರೀಯ ದಾಖಲೆಗಳಿಗೆ ವರ್ಗಾಯಿಸಲಾಗುತ್ತದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.

ಅಮೆರಿಕಾದ ವಿದೇಶಾಂಗ ಇಲಾಖೆ ಇತ್ತೀಚೆಗೆ ಪ್ರಕಟಿಸಿದ ವಾರ್ಷಿಕ ಲೆಕ್ಕಪತ್ರ ವರದಿಯ ಪ್ರಕಾರ, 7.5 ಕ್ಯಾರೆಟ್ ವಜ್ರವು 2023 ರಲ್ಲಿ ಅಮೆರಿಕಾದ ಅಧ್ಯಕ್ಷರ ಕುಟುಂಬವು ಉಡುಗೊರೆಯಾಗಿ ಪಡೆದಿರುವ ಅತ್ಯಂತ ದುಬಾರಿ ವಸ್ತುವಾಗಿದೆ.

ಫೆಡರಲ್ ಕಾನೂನುಗಳ ಪ್ರಕಾರ, ಕಾರ್ಯನಿರ್ವಾಹಕ ಶಾಖೆಯ ಅಧಿಕಾರಿಗಳು ವಿದೇಶಿ ನಾಯಕರು ಮತ್ತು ಸಹವರ್ತಿಗಳಿಂದ $480 ಕ್ಕಿಂತ ಹೆಚ್ಚಿನ ಅಂದಾಜು ಮೌಲ್ಯವನ್ನು ಹೊಂದಿರುವ ಉಡುಗೊರೆಗಳನ್ನು ಪಡೆದರೆ ಅದನ್ನು, ರಾಷ್ಟ್ರೀಯ ಸಂಗ್ರಹಾಲಯಕ್ಕೆ ನೀಡಬೇಕಾಗುತ್ತದೆ. ಹಾಗಾಗಿ, ಪ್ರಧಾನಿ ಮೋದಿ ಅವರು ನೀಡಿರುವ ವಜ್ರವನ್ನು ಅಧಿಕೃತ ಪ್ರದರ್ಶನಗಳಲ್ಲಿ ಇರಿಸಲಾಗುತ್ತದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನವನ್ನು ಉಳಿಸಲು ಬಿಹಾರದಲ್ಲಿ ನಮ್ಮೊಂದಿಗೆ ಸೇರಿ: ರಾಹುಲ್ ಗಾಂಧಿ ಮನವಿ

ಧರ್ಮಸ್ಥಳ, ಅನಾಮಿಕ ಬಿಜೆಪಿಯ ಸೃಷ್ಟಿ: ಈಶ್ವರ್ ಖಂಡ್ರೆ ಹೊಸ ಬಾಂಬ್‌

ಪಕ್ಷದ ಶಿಸ್ತು ಉಲ್ಲಂಘನೆ: ಶಾಸಕಗೆ ಶಿವಗಂಗಾಗೆ ಬಿಸಿ ಮುಟ್ಟಿಸಿದ ಡಿಕೆ ಶಿವಕುಮಾರ್‌

ಆನ್‌ಲೈನ್‌ನಲ್ಲಿ ಹಾಲು ಆರ್ಡರ್ ಮಾಡಲು ಹೋಗಿ ಲಕ್ಷ ಲಕ್ಷ ಕಳೆದುಕೊಂಡ ವೃದ್ಧೆ

ಹಿಮಾಚಲ ಪ್ರದೇಶದಲ್ಲಿ ರಣಮಳೆಗೆ 124ಕ್ಕೂ ಅಧಿಕ ಸಾವು

ಮುಂದಿನ ಸುದ್ದಿ
Show comments