Select Your Language

Notifications

webdunia
webdunia
webdunia
webdunia

ಮೊಸಳೆಯನ್ನೇ ಮದುವೆಯಾದ ಭೂಪ!

ಮೊಸಳೆ
ಮೆಕ್ಸಿಕೊ: ನಮ್ಮ ದೇಶದಲ್ಲಿ ಮಳೆಯಾಗದಿದ್ದರೆ ಕಪ್ಪೆಗಳಿಗೆ, ಕತ್ತೆಗಳಿಗೆ ಮದುವೆ ಮಾಡಿಸುವುದು ನೋಡಿದ್ದೇವೆ. ಹೀಗೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ. ಆದರೆ ಇಲ್ಲೊಬ್ಬ ಮೊಸಳೆಯ ಜತೆ ಮದುವೆಯಾಗಿದ್ದಾನೆ!


ಮೆಕ್ಸಿಕೊ ದೇಶದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಮೆಕ್ಸಿಕೋದ ಮೇಯರ್ ಒಬ್ಬರು ಮೊಸಳೆಯನ್ನೇ ಮದುವೆಯಾಗಿ ಭಾರೀ ಸುದ್ದಿ ಮಾಡಿದ್ದಾರೆ. ಮೊಸಳೆಯನ್ನು ಮದುವೆಯಾಗುವ ಮೂಲಕ ಇಲ್ಲಿನ ಮೀನುಗಾರರಿಗೆ ಒಳ್ಳೆದಾಗಲಿ ಎಂಬುದು ಈ ಮೇಯರ್ ನ ಉದ್ದೇಶವಂತೆ.

ಅದು ಹೇಗೆ ಮದುವೆಯಾದರು ಅಂತೀರಾ? ‘ದ ಪ್ರಿನ್ಸೆನ್’ ಎಂಬ ಮೊಸಳೆಯ ಬಾಯಿಗೆ ಗಟ್ಟಿಯಾಗಿ ಕಟ್ಟಿ, ವೆಡ್ಡಿಂಗ್ ಗೌನ್ ತೊಡಿಸಿ ಬಹಳ ಅದ್ದೂರಿಯಾಗಿ ಮದುವೆ ನೆರವೇರಿತು. ಮದುವೆಯ ನಂತರ ಇಲ್ಲಿನ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆಯೂ ನಡೆಯಿತು. ಮುಂದೆ ಆ ಮೊಸಳೆಯ ಗತಿ ಏನಾಯ್ತು ಎಂಬ ಕುರಿತು ಮಾಹಿತಿಯಿಲ್ಲ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಂಬಳ ಕ್ರೀಡೆ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ