ಹಿಂದೂ ಧರ್ಮೀಯ ನವವಿವಾಹಿತೆಯೋರ್ವಳನ್ನು ಎಳೆದೊಯ್ದು ಬಲವಂತವಾಗಿ 56 ವರ್ಷದವನ ಜತೆ ಮರುಮದುವೆ ಮಾಡಿದ ಖಂಡನೀಯ ಘಟನೆ ಪಾಕಿಸ್ತಾನದ ಥಾರ್ಪರ್ಕರ್ ಜಿಲ್ಲೆಯಲ್ಲಿ ನಡೆದಿದೆ. ಸ್ಥಳೀಯ ಹಿರಿಯರನ್ನೊಳಗೊಂಡ ಜಿರ್ಗಾ ಪಂಚಾಯತ್ ಆದೇಶದ ಮೇರೆಗೆ ಈ ಕೃತ್ಯವನ್ನು ನಡೆಸಲಾಗಿದೆ.
ಪರಷ್ಪರ ಪ್ರೀತಿಸಿದ್ದ ವಾಡಿಯಾ ಭಾಯಿ ಮೇಘಾವರ್ ಮತ್ತು ಆಕೆಯ ಸಂಬಂಧಿ ಸುರೇಶ್ ಹಿರಿಯರ ಅನುಮತಿ ಪಡೆಯದೇ ಕರಾಚಿ ಕೋರ್ಟ್‌ನಲ್ಲಿ ಮೇ 4, 2016ರಂದು ಮದುವೆಯಾಗಿದ್ದರು.
ಕೆಲ ದಿನಗಳ ನಂತರ ವಾಡಿಯಾ ಸಂಬಂಧಿಕರು ಸಾಂಪ್ರದಾಯಿಕವಾಗಿ ಮದುವೆ ಮಾಡುತ್ತೇವೆ ಎಂದು ನಂಬಿಸಿ ಆಕೆಯನ್ನು ಮನೆಗೆ ಕರೆದೊಯ್ದಿದ್ದರು.
ಬಳಿಕ ಆಕೆಯನ್ನು ಬಲವಂತವಾಗಿ 56 ವರ್ಷದ ಚೇತನ್ ಮೇಘಾವರ್ ಜತೆ ಮದುವೆ ಮಾಡಿಸಲಾಯಿತು.
ಈ ಕುರಿತು ಯುವತಿಯ ಪತಿ ಸುರೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.