Publish Date: Mon, 30 May 2022 (10:00 IST)
Updated Date: Mon, 30 May 2022 (10:09 IST)
ಸಿಂಗಾಪುರ: ನಿಷೇಧಿತ ಲೈಂಗಿಕ ಉತ್ತೇಜಕ ಔಷಧಿ ಬೆರೆಸಿದ ಪಾನೀಯ ಸೇವಿಸಿದ ವ್ಯಕ್ತಿ ಈಗ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸಿಂಗಾಪುರದಲ್ಲಿ ಈ ಘಟನೆ ನಡೆದಿದೆ.
ನಿಮಿರುವಿಕೆ ಉತ್ತೇಜಿಸುವ ಔಷಧಿಯನ್ನು ಬೆರೆಸಿದ ಕಾಫಿ ಸೇವಿಸಿದ ವ್ಯಕ್ತಿಗೆ ಜನನಾಂಗದಲ್ಲಿ ತುರಿಕೆ, ನೋವು, ಗುಳ್ಳೆಯಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಇದನ್ನು ಮಾರಾಟ ಮಾಡಲು ಆರೋಗ್ಯಾಧಿಕಾರಿಗಳು ನಿಷೇಧ ಹೇರಿದ್ದರು. ಹಾಗಿದ್ದರೂ ಆನ್ ಲೈನ್ ಮಾರುಕಟ್ಟೆ ಮೂಲಕ ಖರೀದಿಗೆ ಲಭ್ಯವಿತ್ತು.
ಇದೀಗ ಆತನಿಗೆ ಅಲರ್ಜಿ ಕಂಡುಬಂದ ಹಿನ್ನಲೆಯಲ್ಲಿ ಆಂಟಿ ಬಯೋಟಿಕ್ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ಔಷಧಿ ಸೇವಿಸಿದ ಇನ್ನೊಬ್ಬಾತನಿಗೂ ಅಡ್ಡಪರಿಣಾಮವಾಗಿದೆ ಎನ್ನಲಾಗಿದೆ.