Publish Date: Sat, 14 May 2022 (09:10 IST)
Updated Date: Sat, 14 May 2022 (09:26 IST)
ಬೆಂಗಳೂರು: ಕೆಲವರು ಐಫೋನ್ ಬಳಸಿದರೆ ಮತ್ತೆ ಕೆಲವರು ಆಂಡ್ರಾಯ್ಡ್ ಫೋನ್ ಬಳಸುತ್ತಾರೆ. ನಾವು ಬಳಸುವ ಫೋನ್ ನಮ್ಮ ಸ್ವಭಾವ ನಿರ್ಧರಿಸುತ್ತದಂತೆ! ಹೀಗಂತ ಅಧ್ಯಯನ ವರದಿಯೊಂದು ಹೇಳಿದೆ.
ವಿದೇಶೀ ಸಂಸ್ಥೆಯೊಂದರ ಅಧ್ಯಯನವೊಂದರ ಪ್ರಕಾರ ಆಂಡ್ರಾಯ್ಡ್ ಬಳಕೆದಾರರು ಹೆಚ್ಚು ವಿನಯವಂತರು ಮತ್ತು ಉತ್ತಮ ಚಾಲಕರೂ ಆಗಿರುತ್ತಾರಂತೆ.
ಸುಮಾರು 20 ಸಾವಿರಕ್ಕೂ ಅಧಿಕ ಚಾಲಕರ ಸ್ಯಾಂಪಲ್ ಸಂಗ್ರಹಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಐಫೋನ್ ಬಳಕೆದಾರರು ಕೊಂಚ ರಫ್ ಆಗಿರುತ್ತಾರೆ ಎಂಬುದು ಈ ಅಧ್ಯಯನ ವರದಿಯಲ್ಲಿ ಕಂಡುಕೊಂಡ ಅಂಶ.