Select Your Language

Notifications

webdunia
webdunia
webdunia
webdunia

ಕಾಂಗರೂಗೆ ಕಪಾಳಮೋಕ್ಷ: ವೈರಲ್ ವೀಡಿಯೋ

ಕಾಂಗರೂಗೆ ಕಪಾಳಮೋಕ್ಷ: ವೈರಲ್ ವೀಡಿಯೋ
, ಗುರುವಾರ, 8 ಡಿಸೆಂಬರ್ 2016 (11:49 IST)
ನಾಯಿ ಮನುಷ್ಯನ ಅತ್ಯುತ್ತಮ ಸ್ನೇಹಿತ ಎನ್ನಲಾಗುತ್ತಿದೆ. ತನ್ನ ಮನುಷ್ಯ ಸ್ನೇಹಿತನಿಗಾಗಿ ನಾಯಿ ಪ್ರಾಣವನ್ನು ಬಲಿಕೊಡುವುದನ್ನು ಕೇಳಿರುತ್ತೀರಾ, ನೋಡಿರುತ್ತೀರ, ಅನುಭವಿಸಿರುತ್ತೀರ. ಮತ್ತೀಗ ಈ ಸ್ನೇಹಕ್ಕಾಗಿ ತನ್ನ ಜೀವವನ್ನು ಸಹ ಒತ್ತೆ ಇಡಲು ಮನುಷ್ಯ ಸಿದ್ಧ ಎಂಬುದನ್ನು ತೋರಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು ಇಲ್ಲಿಯವರೆಗೂ 22 ಮಿಲಿಯನ್‌ಗಿಂತಲೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. 
ತನ್ನ ಸಾಕುನಾಯಿಯನ್ನು ರಕ್ಷಿಸಲು ವ್ಯಕ್ತಿಯೊಬ್ಬ ಕಾಡುಪ್ರಾಣಿ ಕಾಂಗರೂಗೆ ಕಪಾಳಮೋಕ್ಷ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. 
 
ಹಲವು ವರದಿಗಳ ಪ್ರಕಾರ ಈ ಘಟನೆ ನಡೆದಿದ್ದು ಕಳೆದ ಜೂನ್ ತಿಂಗಳಲ್ಲಿ. ಕಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ತನ್ನ ಕೊನೆಯ ಆಶೆಯಾಗಿ ವಿಚಿತ್ರ ಬಯಕೆಯೊಂದನ್ನು ಗೆಳೆಯರ ಮುಂದಿಟ್ಟಿದ್ದ. ತಮ್ಮ  ಗೆಳೆಯನ ಕೊನೆ ಆಶೆಯಂತೆ 100 ಕೆಜಿ ತೂಕದ ಕಾಡು ಹಂದಿಯನ್ನು ಬೇಟೆ ಮಾಡಲು ಸ್ನೇಹಿತರ ಗುಂಪು ಆಸ್ಟ್ರೇಲಿಯಾದ ಕಾಡೊಂದಕ್ಕೆ ಪ್ರವೇಶಿಸಿದೆ.
 
ಆದರೆ ಕಾಡಿನಲ್ಲಿ ಅವರ ಜತೆ ಹೋಗಿದ್ದ ನಾಯಿಯೊಂದನ್ನು ಕಾಂಗರೂ ಒಂದು ಹಿಡಿದುಕೊಂಡು ಬಿಟ್ಟಿದೆ. ಕಾಂಗರೂವಿನ ಬಿಗಿ ಹಿಡಿತದಿಂದ ತನ್ನ ಕೊರಳನ್ನು ಬಿಡಿಸಿಕೊಳ್ಳಲು ಕಷ್ಟ ಪಡುತ್ತಿದ್ದ ನಾಯಿಯನ್ನು ರಕ್ಷಿಸಲು ಹೊರಟ ಅದರ ಮಾಲೀಕ ಕಾಂಗರೂಗೆ ಕಪಾಳಮೋಕ್ಷ ಮಾಡಿ ತನ್ನ ನಾಯಿಯನ್ನು ರಕ್ಷಿಸಿಕೊಂಡಿದ್ದಾನೆ. 
 
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು ಕೆಲವರು ಇದನ್ನು ಫನ್ನಿಯಾಗಿ ತೆಗೆದುಕೊಂಡರೆ ಮತ್ತೆ ಕೆಲವರು ಕಾಂಗರೂ ಬಗ್ಗೆ ಅನುಕಂಪ ವ್ಯಕ್ತ ಪಡಿಸಿದ್ದಾರೆ.
 
ಈ ವಿಡಿಯೋ ನೋಡಿದ ಪ್ರಾಣಿದಯಾ ಸಂಘದವರು ನಾಯಿ ಮಾಲೀಕ ಗ್ರೇಗ್‌ಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. 
ಕಾಂಗರೂಗೆ ಕಪಾಳಮೋಕ್ಷ: ವೈರಲ್ ವೀಡಿಯೋ
 

Share this Story:

Follow Webdunia kannada

ಮುಂದಿನ ಸುದ್ದಿ

ಡಿಎಂಕೆ ಮುಖ್ಯಸ್ಥ ಎಮ್.ಕರುಣಾನಿಧಿ ಡಿಸ್ಚಾರ್ಜ್