ಕೊರೋನಾ ಶಂಕಿತ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ 24 ಲಕ್ಷ ರೂ. ದಂಡ!

ಮಂಗಳವಾರ, 24 ಮಾರ್ಚ್ 2020 (10:09 IST)
ತೈವಾನ್: ಕೊರೋನಾವೈರಸ್ ವಿಶ್ವದಾದ್ಯಂತ ವ್ಯಾಪಕವಾಗಿದ್ದು ಹೆಚ್ಚು ಕಡಿಮೆ ಎಲ್ಲಾ ರಾಷ್ಟ್ರಗಳೂ ಶಂಕಿತರಿಗೆ ಪ್ರತ್ಯೇಕವಾಗಿರಿಸಲು ಕಟ್ಟು ನಿಟ್ಟಿನ ಸೂಚನೆ ನೀಡಿದೆ.


ಹಾಗಿದ್ದರೂ ತೈವಾನ್ ನಲ್ಲಿ ವ್ಯಕ್ತಿಯೊಬ್ಬ ಈ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಅಲ್ಲಿನ ಸರ್ಕಾರ 28 ಸಾವಿರ ಡಾಲರ್ ಅಂದರೆ ಭಾರತೀಯ ಕರೆನ್ಸಿ ಪ್ರಕಾರ 24 ಲಕ್ಷ ರೂ.ಗಳ ದಂಡ ವಿಧಿಸಿದೆ.

ಈತ ಕೊರೋನಾ ಶಂಕಿತ ವ್ಯಕ್ತಿಯಾಗಿದ್ದ. ಪ್ರತ್ಯೇಕವಾಗಿರಲು ಈತನಿಗೆ ಸೂಚನೆ ನೀಡಲಾಗಿತ್ತು. ಹಾಗಿದ್ದರೂ ನಿಯಮ ಮುರಿದು ನೈಟ್ಸ್ ಕ್ಲಬ್ ಒಂದರಲ್ಲಿ ಕುಣಿದು ಕುಪ್ಪಳಿಸಿದ ತಪ್ಪಿಗೆ ಈ ಶಿಕ್ಷೆ ವಿಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅನಾವಶ್ಯಕವಾಗಿ ಹೊರ ಬಂದರೆ ಕ್ರಮ ಕೈಗೊಳ್ಳಲಾಗುವುದು- ಸಿಎಂ ಎಚ್ಚರಿಕೆ