Publish Date: Tue, 24 Mar 2020 (09:47 IST)
Updated Date: Tue, 24 Mar 2020 (09:48 IST)
ಬೆಂಗಳೂರು: ಕೊರೋನಾವೈರಸ್ ಹರಡುವಿಕೆ ತಡೆಗಟ್ಟಲು ಸರ್ಕಾರ, ಸಿಎಂ ಹೇಳುವ ನಿರ್ದೇಶನಗಳನ್ನು ಪಾಲಿಸಿ ಎಂದು ಕಿಚ್ಚ ಸುದೀಪ್ ಮನವಿ ಮಾಡಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಮೂಲಕ ಮನವಿ ಮಾಡಿರುವ ಕಿಚ್ಚ ದಯವಿಟ್ಟು ಸಿಎಂ ಮಾತುಗಳನ್ನು ಕೇಳಿ. ನಿಮ್ಮ ದೈನಂದಿನ ಅಗತ್ಯಗಳಿಗೆ ಯಾವುದೇ ತೊಂದರೆಯಾಗದು ಎಂದಿದ್ದಾರೆ.
ಸುರಕ್ಷಿತವಾಗಿರಲು ನಾವೆಲ್ಲರೂ ಮನೆಯೊಳಗೇ ಇದ್ದು ಸಹಕರಿಸೋಣ. ಸಿಎಂ, ಸರ್ಕಾರ ಹೇಳುವ ಮಾತುಗಳನ್ನು ಪಾಲಿಸೋಣ. ದೈನಂದಿನ ಅಗತ್ಯ ವಸ್ತುಗಳೂ ಸಿಗದೇ ಹೋಗಬಹುದು ಎಂದು ಭಯಪಡಬೇಕಿಲ್ಲ. ನಿತ್ಯದ ಜೀವನಕ್ಕೆ ಬೇಕಾದ ವಸ್ತುಗಳ ಅಂಗಡಿಗಳು ತೆರೆದಿರುತ್ತವೆ. ಆದರೆ ಮನೆಯೊಳಗೇ ಇದ್ದು ರೋಗ ಹರಡದಂತೆ ಸಹಕರಿಸಿ ಎಂದು ಕಿಚ್ಚ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.