Select Your Language

Notifications

webdunia
webdunia
webdunia
webdunia

ಭಾರತ-ಅಮೆರಿಕ ರಾಜತಾಂತ್ರಿಕ ಸಂಬಂಧಕ್ಕೆ 70 ವರ್ಷ: ಸ್ಟಾರ್ಸ್ ಅಂಡ್ ಸ್ಟ್ರೈಪ್ಸ್ ಕ್ವಿಜ್ ಗೆದ್ದ ಲೋಯೊಲಾ ಕಾಲೇಜ್

ಭಾರತ-ಅಮೆರಿಕ ರಾಜತಾಂತ್ರಿಕ ಸಂಬಂಧಕ್ಕೆ 70 ವರ್ಷ: ಸ್ಟಾರ್ಸ್ ಅಂಡ್ ಸ್ಟ್ರೈಪ್ಸ್ ಕ್ವಿಜ್ ಗೆದ್ದ ಲೋಯೊಲಾ ಕಾಲೇಜ್
ಚೆನ್ನೈ , ಗುರುವಾರ, 14 ಸೆಪ್ಟಂಬರ್ 2017 (09:06 IST)
ಭಾರತ ಮತ್ತು ಅಮೆರಿಕ ದೇಶಗಳ ರಾಜತಾಂತ್ರಿಕ ಸಂಬಂಧದ 70ನೇ ವರ್ಷಾಚರಣೆ ಅಂಗವಾಗಿ ಚೆನ್ನೈನಲ್ಲಿರುವ ಅಮೆರಿಕದ ಕಾನ್ಸುಲೇಟ್ ವತಿಯಿಂದ ವುಮೆನ್ಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಸ್ಟಾರ್ಸ್ ಅಂಡ್ ಸ್ಟ್ರೈಪ್ಸ್ ಚಾಲೆಂಜ್ ಕ್ವಿಜ್ ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ ಚೆನ್ನೈನ 23 ಕಾಲೇಜುಗಳು ಭಾಗವಹಿಸಿದ್ದವು. ಮೂರು ರೌಂಡ್`ನ ಸ್ಪರ್ಧೆಯಲ್ಲಿ ಲೊಯೋಲಾ ಕಾಲೇಜಿನ ಜೋಶೂ ರಾಜೇಶ್ ಮತ್ತು ಜೋಸೆಫ್ ಕ್ಷೇವಿಯರ್ ಕ್ವಿಜ್ ಗೆದ್ದರು. ಐಐಟಿ ಮದ್ರಾಸ್`ನ ಗಿರಿಧರ್ ಶ್ರೀರಾಮನ್ ಮತ್ತು ಸಿದ್ಧಾರ್ಥ ಎಸ್ ನಥನ್ 2ನೇ ದ್ವಿತೀಯ ಪಡೆದರೆ,  ಸ್ಟೆಲ್ಲಾ ಮೇರೀಸ್ ಕಾಲೇಜನ್ನ ಪ್ರತಿನಿಧಿಸಿದ್ದ ವಿ. ಸಂಜನಾ ಮತ್ತು ಶ್ವೇತಾ ಮಧು ತೃತೀಯ ಸ್ತಾನಕ್ಕೆ ತೃಪ್ತಿ ಪಟ್ಟರು. ಡಾ. ಎಂಜಿಆರ್ ಯೂನಿವರ್ಸಿಟಿ ಮತ್ತು ವುಮೆನ್ಸ್ ಕ್ರಿಶ್ಚಿಯನ್ ಕಾಲೇಜು ಸ್ಪರ್ಧಿಗಳು ಫೈನಲ್ ತಲುಪುವಲ್ಲಿ ಯಶಸ್ವಿಯಾದರು.

ಕ್ವಿಜ್`ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದ ಚೆನ್ನೈನ ಯುಸ್ ಕಾನ್ಸುಲೇಟ್`ನ ಪಬ್ಲಿಕ್ ಡಿಪ್ಲೊಮೆಸಿ ಅಂಡ್ ಪಬ್ಲಿಕ್ ಅಫೇರ್ಸ್ ಕಾನ್ಸುಲ್ ಲಾರೆನ್ ಲವ್ಲೆಸ್, ಚೆನ್ನೈನ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅಮೆರಿಕ ಮತ್ತು ಇಂಡಿಯಾ ಸಂಬಂಧಗಳ ಇತಿಹಾಸದ ಬಗ್ಗೆ ಅವರಿಗಿರುವ ಆಳವಾದ ತಿಳುವಳಿಕೆ ಮತ್ತು ಜ್ಞಾನದ ಬಗ್ಗೆ ಕೇಳಲು ಸಂತಸವಾಗುತ್ತಿದೆ. ನಮ್ಮ ಎರಡು ದೇಶಗಳ ನಡುವಿನ 70 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ಆಚರಿಸಲು ಇದು ಒಂದು ಮಹತ್ವದ ಸಂದರ್ಭವಾಗಿದೆ. ಎಂದರು. ಮಹಿಳಾ ಕ್ರಿಶ್ಚಿಯನ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಲಿಲಿಯನ್ ಜಾಸ್ಪರ್ ಈ ಸಂದರ್ಭದಲ್ಲಿ  ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ಸರ್ ಮೇಡಮ್ ಅನ್ನುವ ಹಾಗಿಲ್ಲ, ಜೈ ಹಿಂದ್ ಎನ್ನಬೇಕು!