Select Your Language

Notifications

webdunia
webdunia
webdunia
webdunia

ಮಲ್ಯಗೆ ದಿವಾಳಿ ಎಂದು ಘೋಷಿಸಿದ ಲಂಡನ್ ಹೈಕೋರ್ಟ್!

ಮಲ್ಯಗೆ  ದಿವಾಳಿ ಎಂದು ಘೋಷಿಸಿದ ಲಂಡನ್ ಹೈಕೋರ್ಟ್!
ಲಂಡನ್ , ಮಂಗಳವಾರ, 27 ಜುಲೈ 2021 (07:50 IST)
ಲಂಡನ್(ಜು.26): ಭಾರತೀಯ ಬ್ಯಾಂಕ್ಗಳಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾದ ಉದ್ಯಮಿ ವಿಜಯ್ ಮಲ್ಯಗೆ ಇದೀಗ ಮತ್ತೆ ಸಂಕಷ್ಟ ಹೆಚ್ಚಾಗಿದೆ. ಉದ್ಯಮಿ ವಿಜಯ್ ಮಲ್ಯ ದಿವಾಳಿ ಎಂದು ಲಂಡನ್ ಹೈಕೋರ್ಟ್ ಘೋಷಿಸಿದೆ.  ಕೋರ್ಟ್ ತೀರ್ಪು ಭಾರತೀಯ ಬ್ಯಾಂಕ್ಗಳಿ ಬಹುದೊಡ್ಡ ಗೆಲುವನ್ನು ತಂದುಕೊಟ್ಟಿದೆ.

•ಭಾರತೀಯ ಬ್ಯಾಂಕ್ಗೆ ವಂಚಿಸಿ ವಿದೇಶಕ್ಕೆ ಪರಾರಿಯಾದ ವಿಜಯ್ ಮಲ್ಯಗೆ ಸಂಕಷ್ಟ
•ವಿಜಯ್ ಮಲ್ಯ ದಿವಾಳಿ ಎಂದು ಘೋಷಿಸಿದ ಲಂಡನ್ ಹೈಕೋರ್ಟ್

ಮಲ್ಯ, ನೀರವ್, ಚೋಕ್ಸಿಯ ಆಸ್ತಿ ಸೀಜ್, 9,371 ಕೋಟಿ ರೂ ಬ್ಯಾಂಕ್ಗೆ ಹಸ್ತಾಂತರ!
ಲಂಡನ್ ಹೈಕೋರ್ಟ್ ಮಲ್ಯರನ್ನು ದಿವಾಳಿ ಎಂದು ಘೋಷಿಸುತ್ತಿದ್ದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಭಾರತೀಯ ಬ್ಯಾಂಕ್ಗಳ ಒಕ್ಕೂಟ ಹೆಚ್ಚು ಸಂಭ್ರಮಿಸಿದೆ. ಕಾರಣ ಸ್ಥಗಿತಗೊಂಡಿರುವ ಕಿಂಗ್ಫಿಶರ್ ಏರ್ಲೈನ್ಸ್ನ ಭಾರತದಲ್ಲಿರುವ ಆಸ್ತಿಗಳನ್ನು ವಶಪಡಿಸಿಕೊಂಡು ಇದರಿಂದ ಸಾಲದ ಮೊತ್ತವನ್ನು ಪಡೆಯಲು ಈ ಘೋಷಣೆ ಸಹಕಾರಿಯಾಗಲಿದೆ.
ಚೋಕ್ಸಿ ಬೆನ್ನಲ್ಲೇ ಮಲ್ಯಗೂ ಹೆಚ್ಚಿದ ಸಂಕಷ್ಟ; Uಃ ಷೇರು ಮಾರಾಟಕ್ಕೆ ಮುಂದಾದ ಬ್ಯಾಂಕ್
ಇದರ ಜೊತೆಗೆ ವಿಜಯ್ ಮಲ್ಯಗೆ ಮತ್ತೊಂದು ಹಿನ್ನಡೆಯಾಗಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುಮತಿ ನಿರಾಕರಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಲಂಡನ್ ನ್ಯಾಯಾಲಯ ಎಸ್ಬಿಐ ನೇತೃತ್ವದ ಬ್ಯಾಂಕ್ ಒಕ್ಕೂಟ ಸಲ್ಲಿಸಿದ್ದ ಮಲ್ಯ ದಿವಾಳಿತನದ ಅರ್ಜಿಯನ್ನು ತಿದ್ದುಪಡಿ ಮಾಡಬೇಕು, ಜೊತೆಗೆ ಅವರ ಆಸ್ತಿಯನ್ನು ಮುಟ್ಟುಗೋಲು ಮಾಡಲು ಅನುಮತಿ ನೀಡಬೇಕು ಎಂದು ಕೋರಿತ್ತು

 

Share this Story:

Follow Webdunia kannada

ಮುಂದಿನ ಸುದ್ದಿ

ಮೀರಾಬಾಯಿ ಅವರನ್ನು ASPಯಾಗಿ ನೇಮಿಸಲಿದೆ ಮಣಿಪುರ ಸರ್ಕಾರ