Select Your Language

Notifications

webdunia
webdunia
webdunia
webdunia

ಲಾಕ್ಡೌನ್ ಜಾರಿಗೊಳಿಸಿದ ಆಸ್ಟ್ರಿಯಾ!

ಲಾಕ್ಡೌನ್ ಜಾರಿಗೊಳಿಸಿದ ಆಸ್ಟ್ರಿಯಾ!
ವಿಯೆನ್ನಾ , ಗುರುವಾರ, 25 ನವೆಂಬರ್ 2021 (10:37 IST)
ವಿಯೆನ್ನಾ : ಕೊರೊನಾ ವೈರಸ್ ಸೋಂಕು ಮರೆಯಾಗುತ್ತಿದೆ ಎಂದು ಜನರು ಮೈಮರೆಯುತ್ತಿದ್ದಾರೆ.
ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗುತ್ತಿರುವುದು ಇದಕ್ಕೆ ಕಾರಣ. ಇನ್ನೊಂದೆಡೆ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಕೋವಿಡ್ 19 ಕಡಿಮೆಯಾಗುತ್ತಿದೆ ಎಂದು ನಾವು ಮೈಮರೆಯುವಂತಿಲ್ಲ ಎಂಬುದನ್ನು ಯುರೋಪಿಯನ್ ದೇಶಗಳ ಈಗಿನ ಸನ್ನಿವೇಶ ಆಘಾತ ಮೂಡಿಸುವಂತಿದೆ.
ಕೊರೊನಾ ವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆ ಹಿನ್ನೆಲೆಯಲ್ಲಿ ಆಸ್ಟ್ರಿಯಾ ಲಾಕ್ಡೌನ್ ಘೋಷಿಸಿದೆ. ಅಲ್ಲದೆ, ದೇಶದ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಅಲ್ಲಿ ಈಗ ನಾಲ್ಕನೇ ಅಲೆ ಆರಂಭವಾಗಿದೆ. ಈ ಋತುಮಾನದಲ್ಲಿ ಹೊಸ ಅಲೆ ಸೋಂಕಿನಿಂದ ಲಾಕ್ಡೌನ್ ಘೋಷಿಸಿದ ಪಶ್ಚಿಮ ಯುರೋಪ್ನ ಮೊದಲ ದೇಶ ಎನಿಸಿದೆ. ಅಲ್ಲದೆ, ಕೋವಿಡ್ ಲಸಿಕೆಯನ್ನು ಕಡ್ಡಾಯಗೊಳಿಸಿದ ಮೊದಲ ದೇಶವೂ ಹೌದು.
ಆಸ್ಟ್ರಿಯಾದ ಒಟ್ಟಾರೆ ಜನಸಂಖ್ಯೆಯಲ್ಲಿ ಅಂದಾಜು ಮೂರನೇ ಎರಡರಷ್ಟು ಮಂದಿ ಸಂಪೂರ್ಣ ಲಸಿಕೆಗಳನ್ನು ಪಡೆದಿದ್ದಾರೆ. ಇದು ಯುರೋಪಿನ ದೇಶಗಳಲ್ಲಿನ ಕಡಿಮೆ ಲಸಿಕೆ ಸಾಧನೆಯ ದೇಶಗಳಲ್ಲಿ ಒಂದು. ಹೀಗಾಗಿ ಫೆಬ್ರವರಿಯಿಂದ ಸಂಪೂರ್ಣ ಜನಸಂಖ್ಯೆಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ಸೋಮವಾರದಿಂದ (ನ. 22) ಆಸ್ಟ್ರಿಯಾದಲ್ಲಿ ಕಠಿಣ ಲಾಕ್ಡೌನ್ ಜಾರಿಯಾಗಲಿದೆ ಎಂದು ಚಾನ್ಸೆಲರ್ ಅಲೆಕ್ಸಾಂಡರ್ ಶಾಲೆನ್ಬರ್ಗ್ ತಿಳಿಸಿದ್ದಾರೆ. ಹತ್ತು ದಿನಗಳವರೆಗೆ ಲಾಕ್ಡೌನ್ ಮುಂದುವರಿಯಲಿದೆ. ಒಂದು ವೇಳೆ ಈ ಅವಧಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಾರದೆ ಇದ್ದಲ್ಲಿ, ಲಾಕ್ಡೌನ್ ಮತ್ತಷ್ಟು ದಿನಗಳಿಗೆ ವಿಸ್ತರಣೆಯಾಗಲಿದೆ. ಫೆಬ್ರವರಿ 1 ರಿಂದ ದೇಶಾದ್ಯಂತ ಲಸಿಕೆ ಕಡ್ಡಾಯವಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಯಾತ್ರಾರ್ಥಿಗಳಿಗೆ ಮಳೆಯ ಆತಂಕ, ಯಾತ್ರೆಗೂ ಅಡ್ಡಿ!