ಲಾಹೋರ್: ಪಾಕಿಸ್ತಾನದಲ್ಲಿ ಮತ್ತೆ ಅಜ್ಞಾತ ಶೂಟರ್ ಕರಾಮತ್ತು ಲಾಹೋರ್ ನಲ್ಲಿ ಲಷ್ಕರ್ ಉಗ್ರ ಅಮೀರ್ ಹಮ್ಜಾ ಮನೆಗೇ ನುಗ್ಗಿ ಗುಂಡಿಕ್ಕಲಾಗಿದೆ. ಘಟನೆಯಲ್ಲಿ ಆತ ಈಗ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.
ಲಷ್ಕರ್ ಇ ತೊಯ್ಬಾದ ಪ್ರಮುಖ ನಾಯಕ, ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಗೆ ಪರಮಾಪ್ತನಾಗಿದ್ದ ಅಮೀರ್ ಹಮ್ಜಾ ಮನೆಗೇ ನುಗ್ಗಿ ಗುಂಡಿಕ್ಕಲಾಗಿದೆ. 66 ವರ್ಷದ ಹಮ್ಜಾ ಗಂಭೀರ ಗಾಯಗೊಂಡಿದ್ದು ಪಾಕಿಸ್ತಾನದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತನಿಗೆ ಐಎಸ್ಐ ಭದ್ರತೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತ ಗಾಯಗೊಂಡಿದ್ದು ಹೇಗೆ ಎಂಬುದನ್ನು ಪಾಕಿಸ್ತಾನ ಇನ್ನೂ ಬಾಯ್ಬಿಟ್ಟಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ರಕ್ತಸಿಕ್ತವಾಗಿರುವ ಹಮ್ಜಾನನ್ನು ಆಸ್ಪತ್ರೆಗೆ ದಾಖಲಿಸುವ ವಿಡಿಯೋ, ಫೋಟೋಗಳು ವೈರಲ್ ಆಗಿವೆ. ಮೊನ್ನೆಯಷ್ಟೇ ಅಪರಿಚಿತ ಬಂದೂಕುಧಾರಿ ಪಾಕಿಸ್ತಾನದಲ್ಲಿ ಲಷ್ಕರ್ ಸಂಘಟನೆಯ ಪ್ರಮುಖ ಉಗ್ರ ಸೈಫುಲ್ಲಾನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ.