Select Your Language

Notifications

webdunia
webdunia
webdunia
webdunia

ಚೀನಾದಲ್ಲಿ ಭೂಕುಸಿತ: 141 ಮಂದಿ ಜೀವಂತ ಸಮಾಧಿ

ಚೀನಾದಲ್ಲಿ ಭೂಕುಸಿತ: 141 ಮಂದಿ ಜೀವಂತ ಸಮಾಧಿ
ಬೀಜಿಂಗ್ , ಶನಿವಾರ, 24 ಜೂನ್ 2017 (12:03 IST)
ಬೀಜಿಂಗ್:ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ 141 ಮಂದಿ ಜೀವಂತ ಸಮಾಧಿಯಾಗಿದ್ದಾರೆ.
 
ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಕ್ಸಿನ್ ಮೋ ಗ್ರಾಮದ ಗುಡ್ಡ ಕುಸಿದ ಪರಿಣಾಮ ಅಲ್ಲಿದ್ದ ಸುಮಾರು 40ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ. ಅಂತೆಯೇ ಅದರೊಳಗಿದ್ದ ಸುಮಾರು 141ಕ್ಕೂ ಅಧಿಕ ಮಂದಿ ಮಣ್ಣಿನ ಅವಶೇಷಗಳಡಿಯಲ್ಲಿ ಹುದುಗಿ ಸಮಾಧಿಯಾಗಿದ್ದಾರೆ. 
 
ಚೀನಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಿಬ್ಬಂದಿಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸುಮಾರು 1 ಕಿ.ಮೀ ವರಗೂ ಮಣಿನ ರಾಶಿ ಕುಸಿದಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರು ಮೂಲದ ನರ್ಸ್ ನೆರವಿಗೆ ಬಂದ ಸಚಿವೆ ಸುಷ್ಮಾ ಸ್ವರಾಜ್