Select Your Language

Notifications

webdunia
webdunia
webdunia
webdunia

ಎರಡು ರೈಲು ಮುಖಾಮುಖಿ ಡಿಕ್ಕಿ: 23 ದುರ್ಮರಣ

ಎರಡು ರೈಲು ಮುಖಾಮುಖಿ ಡಿಕ್ಕಿ: 23 ದುರ್ಮರಣ
ರೋಮ್ , ಬುಧವಾರ, 13 ಜುಲೈ 2016 (08:59 IST)
ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗಿ 23 ಮಂದಿ ದುರ್ಮರಣವನ್ನಪ್ಪಿದ ಹೃದಯವಿದ್ರಾವಕ ಘಟನೆ ದಕ್ಷಿಣ ಇಟಲಿಯಲ್ಲಿ ಮಂಗಳವಾರ ನಡೆದಿದೆ. ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಸಮಯ 11.30 ರ ಸುಮಾರಿಗೆ  ಈ ಘೋರ ದುರಂತ ನಡೆದಿದೆ.

ಎರಡೂ ರೈಲುಗಳು ಒಂದೇ ಹಳಿಯಲ್ಲಿ ಎದುರುಬದುರಾಗಿ ಬಂದ ಪರಿಣಾಮವಾಗಿ ಈ ಘಟನೆ ಸಂಭವಿಸಿದ್ದು ನಜ್ಜುಗುಜ್ಜಾಗಿರುವ ಬೋಗಿಗಳು ಘಟನೆಯ ಭೀಕರತೆಗೆ ಸಾಕ್ಷಿಯಾಗಿವೆ. 
 
ಕರಾವಳಿ ಪಟ್ಟಣಗಳಾದ ಬರಿ ಮತ್ತು ಬರ್ಲೆಟ್ಟಾ ನಡುವೆ ಈ ಘಟನೆ ನಡೆದಿದ್ದು ರಕ್ಷಣಾ ಕಾರ್ಯಾಚರಣೆ ಬಿರುಸಿಂದ ಸಾಗಿದೆ. ರಕ್ತದಾನಿಗಳು ತುರ್ತು ಸಹಾಯಕ್ಕೆ ಬರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. 
 
ಕೊರಾಟೋ ಮತ್ತು ಅಂಡ್ರಿಯಾ ನಗರಗಳ ನಡುವೆ ಒಂದೇ ರೈಲ್ವೇ ಹಳಿಯನ್ನು ನಿರ್ಮಿಸಿರುವುದು ಈ ಅನಾಹುತಕ್ಕೆ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ.
 
ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಮಿಲಾನ್ ಪ್ರವಾಸದಲ್ಲಿದ್ದ ಪ್ರಧಾನಿ ಮಾಟೋ ರೆನ್ಜಿ ರೋಮ್‌ಗೆ ವಾಪಸ್ಸಾಗಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿರುವ ಅವರು ಮೃತಪಟ್ಟ ಪ್ರಯಾಣಿಕರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಕ್ರಿಕೆಟಿಗನ ಮೂರನೇ ಇನ್ನಿಂಗ್ಸ್?