Select Your Language

Notifications

webdunia
webdunia
webdunia
webdunia

ಮಾಜಿ ಕ್ರಿಕೆಟಿಗನ ಮೂರನೇ ಇನ್ನಿಂಗ್ಸ್?

ಮಾಜಿ ಕ್ರಿಕೆಟಿಗನ ಮೂರನೇ ಇನ್ನಿಂಗ್ಸ್?
ಇಸ್ಲಾಮಾಬಾದ್‌ , ಬುಧವಾರ, 13 ಜುಲೈ 2016 (08:34 IST)
ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನ್‌ ತೆಹ್ರೀಕ್‌ ಎ ಇನ್ಸಾಫ್‌ ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಮೂರನೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಪಾಕಿಸ್ತಾನದಲ್ಲಿ ಹರಿದಾಡುತ್ತಿದೆ.

63 ವರ್ಷದ ಇಮ್ರಾನ್‌ ಅವರು ಮರಿಯಮ್ ಜಿಯೋ ಎಂಬಾಕೆಯನ್ನು ಲಂಡನ್‌ನಲ್ಲಿ ವಿವಾಹವಾಗಿದ್ದಾರೆ. ಆಕೆ ಅವರ ಆಧ್ಯಾತ್ಮಿಕ ಗುರು ಎಂದು ಹೇಳಲಾಗುತ್ತಿದೆ.
 
ತಾವು ಮತ್ತೊಂದು ಮದುವೆಯಾಗಲು ಇಚ್ಛಿಸಿದ್ದೀರಾ ಎಂದು ಕೆಲ ದಿನಗಳ ಹಿಂದೆ ಮಾಧ್ಯಮವೊಂದರಲ್ಲಿ ಕೇಳಲಾದ ಪ್ರಶ್ನೆಗೆ ಖಾನ್ ಸಕಾರಾತ್ಮಕ ಉತ್ತರ ನೀಡಿದ್ದರು. ಆದರೆ ತಮ್ಮ ಮದುವೆಯ ಕುರಿತ ಸುದ್ದಿಯನ್ನು  ಇಮ್ರಾನ್‌ ಖಾನ್‌ ಅಲ್ಲಗಳೆದಿದ್ದಾರೆ. ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಸುದ್ದಿ ಸತ್ಯಕ್ಕೆ ದೂರವಾದುದು. ಇದರಲ್ಲಿ ಯಾವುದೇ ವಾಸ್ತವಾಂಶವಿಲ್ಲ. ಒಂದು ವೇಳೆ ನಾನು ಮದುವೆಯಾಗುವುದಾದರೆ ಮೊದಲೇ  ಬಹಿರಂಗ ಪಡಿಸುತ್ತೇನೆ ಖಾನ್ ಟ್ವೀಟ್ ಮಾಡಿದ್ದಾರೆ.
 
ಇಮ್ರಾನ್‌ ಅವರು ಈ ಮೊದಲು ಎರಡು ಮದುವೆಯಾಗಿದ್ದು, ಎರಡನೆಯ ಪತ್ನಿಗೆ ಕಳೆದ 7 ತಿಂಗಳ ಹಿಂದೆ ತಲಾಕ್‌ (ವಿಚ್ಛೇದನ) ನೀಡಿದ್ದರು.
 
1995ರಲ್ಲಿ ಜೆಮಿಮಾ ಗೋಲ್ಡ್‌ಸ್ಮಿತ್‌  ಅವರನ್ನು ಮದುವೆಯಾಗಿದ್ದ ಇಮ್ರಾನ್‌ 2004ರಲ್ಲಿ ಅವರಿಗೆ ವಿಚ್ಛೇದನ ನೀಡಿದ್ದರು. ಇಮ್ರಾನ್ ಮತ್ತು ಜೆಮಿನಾ ಅವರಿಗೆ ಸುಲೇಮಾನ್ ಮತ್ತು ಖಾಸಿಂ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಬಿಬಿಸಿಯಲ್ಲಿ ನಿರೂಪಕಿಯಾಗಿರುವ ರೆಹಾಮ್‌ ಖಾನ್‌ ಅವರನ್ನು ವರಿಸಿದ್ದ ಅವರು 10 ತಿಂಗಳೊಳಗೆ ಆಕೆಗೂ ವಿಚ್ಛೇದನ ನೀಡಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಗ್ಗಿ ಹೇಳಲು ಬರದಿದ್ದಕ್ಕೆ ಮಗಳ ಬಾಯಿಗೆ ಈರುಳ್ಳಿ ತುರುಕಿ ಕೊಲೆಗೈದ ಅಪ್ಪ