Publish Date: Sat, 28 Feb 2026 (13:14 IST)
Updated Date: Sat, 28 Feb 2026 (13:16 IST)
ಟೆಹ್ರಾನ್: ಇರಾನ್ ಕೇಂದ್ರ ಸ್ಥಾನದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ್ದು ಎರಡೂ ದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ.
ಇರಾನ್ ಸಂಭಾವ್ಯ ದಾಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಈ ದಾಳಿ ನಡೆಸಿದ್ದಾಗಿ ಇಸ್ರೇಲ್ ಸ್ಪಷ್ಟನೆ ನೀಡಿದೆ. ಇರಾನ್ ಸರ್ವೋಚ್ಛ ನಾಯಕ ಅಲಿ ಖಮೇನಿ, ಅಧ್ಯಕ್ಷ ಮಸೂದ್ ಭವನಗಳನ್ನು ಗುರಿಯಾಗಿಸಿ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಭಾರೀ ಸ್ಪೋಟದಿಂದಾಗಿ ಇರಾನ್ ಜನತೆ ಬೆಚ್ಚಿಬಿದ್ದಿದ್ದಾರೆ.
ಇರಾನ್ ತನ್ನ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಸನ್ನದ್ಧವಾಗಿತ್ತು. ಅದಕ್ಕೆ ಮುನ್ನೆಚ್ಚರಿಕೆ ನೀಡಲು ದಾಳಿ ನಡೆಸಿದ್ದಾಗಿ ಇಸ್ರೇಲ್ ಹೇಳಿದೆ. ಇನ್ನು ಇಸ್ರೇಲ್ ದಾಳಿಗೆ ಅಮೆರಿಕಾ ಕೂಡಾ ಕೈಜೋಡಿಸಿದೆ. ಇರಾನ್ ತನ್ನ ಅಣ್ವಸ್ತ್ರ ಕಾರ್ಯಾಚರಣೆ ಮುಂದುವರಿಸಿದರೆ ದಾಳಿ ನಡೆಸುವುದಾಗಿ ಅಮೆರಿಕಾ ಮತ್ತು ಇಸ್ರೇಲ್ ಮೊದಲೇ ಎಚ್ಚರಿಕೆ ನೀಡಿದ್ದವು.
ಕಳೆದ ವರ್ಷ ಜೂನ್ ನಲ್ಲಿ ಎರಡೂ ದೇಶಗಳ ನಡುವೆ ಭಾರೀ ಯುದ್ಧವೇ ನಡೆದಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಇರಾನ್-ಇಸ್ರೇಲ್ ಸಂಘರ್ಷ ಮತ್ತೆ ಭುಗಿಲೆದ್ದಿದೆ.