ನವದೆಹಲಿ : ಗಲ್ವಾನ್ ಕಣಿವೆಯಲ್ಲಿ ಭಾರತದೊಂದಿಗಿನ ಘರ್ಷಣೆಯ ವೇಳೆ ಚೀನಾ ಕಡೆಯಲ್ಲಿ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ಆಸ್ಟ್ರೇಲಿಯಾದ ಪತ್ರಿಕೆಯೊಂದು ತನಿಖಾ ವರದಿ ಮಾಡಿದೆ.
ಚೀನಾದಲ್ಲಿನ ಮೂಲಗಳನ್ನು ಆಧಾರಿಸಿ ಆಸ್ಟ್ರೇಲಿಯಾದ ದಿ ಕ್ಲಾಕ್ಸನ್‌ನ ಪತ್ರಿಕೆ, 2020ರ ಜೂನ್ 15-16 ರ ಘರ್ಷಣೆಯ ಆರಂಭದ ಸಮಯದಲ್ಲಿ ಭಾರತೀಯ ಸೇನೆಯಿಂದ ಪಾರಾಗಲು ಗಾಲ್ವಾನ್ ನದಿಯನ್ನು ರಾತ್ರಿ ದಾಟುವ ವೇಳೆ ಕನಿಷ್ಠ 38 ಚೀನಿ ಸೈನಿಕರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪ್ರಕಟಿಸಿದೆ.
ಚೀನಾ ಬ್ಲಾಗರ್‌ಗಳು, ಚೀನಿ ನಾಗರಿಕರಿಂದ ಪಡೆದ ಮಾಹಿತಿಯನ್ನು ಆಧರಿಸಿ ಈ ಸುದ್ದಿ ಪ್ರಕಟಿಸಲಾಗಿದೆ. ಭದ್ರತಾ ಕಾರಣದಿಂದ ಚೀನಿ ಮೂಲಗಳ ಹೆಸರನ್ನು ಬಹಿರಂಗ ಪಡಿಸುವುದಿಲ್ಲ ಎಂದು ಪತ್ರಿಕೆ ಹೇಳಿದೆ.
ಘರ್ಷಣೆಯಲ್ಲಿ ಮಡಿದ ತನ್ನ ನಾಲ್ಕು ಸೈನಿಕರಿಗೆ ಫೆಬ್ರವರಿ 2021 ರಲ್ಲಿ ಚೀನಾ ಪದಕಗಳನ್ನು ಘೋಷಿಸಿತ್ತು. ಈ ಮೂಲಕ ಘಟನೆಯಲ್ಲಿ ನಮ್ಮ ಕಡೆಯಲ್ಲೂ ಸಾವು ನೋವು ಸಂಭವಿಸಿದೆ ಎನ್ನುವುದನ್ನು ಮೊದಲ ಬಾರಿಗೆ ಖಚಿತ ಪಡಿಸಿತ್ತು.
ಹೀಗಿದ್ದರೂ ಅಧಿಕೃತವಾಗಿ ಚೀನಾ ವರದಿ ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾವು ಸಂಭವಿಸಿದೆ ಎಂದು ವರದಿ ಹೇಳಿದೆ.