Webdunia - Bharat's app for daily news and videos

Install App

ಏರ್‌ಸ್ಟ್ರೈಕ್‌ಗೆ ಕ್ಯಾರೇ ಎನ್ನದ ಇರಾನ್‌: ಇಸ್ರೇಲ್‌ ಮೇಲೆ ಮಿಸೈಲ್‌ಗಳ ಸುರಿಮಳೆ, ಗಗನಚುಂಬಿ ಕಟ್ಟಡಗಳಿಗೆ ಹಾನಿ

Sampriya
ಭಾನುವಾರ, 22 ಜೂನ್ 2025 (12:02 IST)
Photo Credit X
ಟೆಲ್‌ ಅವೀವ್‌: ಅಮೆರಿಕಾ ಏರ್‌ಸ್ಟೈಕ್‌ಗೂ ಇರಾನ್‌ ಕ್ಯಾರೇ ಎನ್ನುತ್ತಿಲ್ಲ. ತನ್ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕಾ ಸೇನೆ ದಾಳಿ ನಡೆಸಿದ ಬೆನ್ನಲ್ಲೇ ಇಸ್ರೇಲ್‌ ಮೇಲಿನ ದಾಳಿಯನ್ನು ಇರಾನ್‌  ಮುಂದುವರಿಸಿದೆ. 

ಇಸ್ರೇಲ್‌ನ ಹೈಫಾ ನಗರ, ರಾಜಧಾನಿ ಟೆಲ್ ಅವೀವ್, ಜೆರುಸಲೆಂ ಸೇರಿದಂತೆ 10ಕ್ಕೂ ಹೆಚ್ಚು ನಗರಗಳ ಮೇಲೆ ಮಿಸೈಲ್‌ ಮಳೆ ಸುರಿಸಿದೆ. ಮಿಸೈಲ್‌ ದಾಳಿಗೆ ಇಸ್ರೇಲ್‌ನ ಗಗನಚುಂಬಿ ಕಟ್ಟಡಗಳಿಗೆ ಹಾನಿಯಾಗಿದೆ. ಅಮೆರಿಕ ದಾಳಿ ಬಳಿಕ ಇರಾನ್‌ನ ಮೊದಲ ಪ್ರತೀಕಾರ ಇದಾಗಿದೆ.

ಇರಾನ್‌ನ ಮಿಸೈಲ್‌ಗಳು ನಗರಕ್ಕೆ ಅಪ್ಪಳಿಸುತ್ತಿದ್ದಂತೆ ಇಸ್ರೇಲ್‌ನ ಕೆಲವು ಭಾಗಗಳಲ್ಲಿ ಸೈರನ್‌ ಮೊಳಗಿದೆ. ನಾಗರಿಕರನ್ನ ಸುರಕ್ಷಿತ ಸ್ಥಳಗಳು ಮತ್ತು ಬಂಕರ್‌ಗಳಿಗೆ ಸ್ಥಳಾಂತರಿಸಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಬಂಕರ್‌ಗಳಿಂದ ಆಚೆ ಬರದಂತೆ ಸೂಚಿಸಲಾಗಿದೆ. ನಾಗರಿಕರನ್ನು ಗುರಿಯಾಗಿಸಿ ಇರಾನ್‌ ನಡೆಸಿದ ಈ ದಾಳಿಯಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 

ಇರಾನ್‌ ಹಾಗೂ ಇಸ್ರೇಲ್ ನಡುವೆ ನಡೆಯುತ್ತಿದ್ದ ಯುದ್ಧದ ಮಧ್ಯಪ್ರವೇಶಿಸಿದ ಅಮೆರಿಕ, ಇರಾನ್‌ನ 3 ಪರಮಾಣು ಸ್ಥಾವರಗಳ ಮೇಲೆ ಬಾಂಬ್ ದಾಳಿ ನಡೆಸಿ, ಯಶಸ್ವಿಯಾಗಿ ನಾಶಪಡಿಸಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಖಚಿತಪಡಿಸಿದ್ದಾರೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka weather: ಕರಾವಳಿ, ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್‌

ಇರಾನ್‌ ಮೇಲೆ ಅಮೆರಿಕಾ ಏರ್‌ಸ್ಟ್ರೇಕ್: ಮತ್ತಷ್ಟು ದಾಳಿಯ ಎಚ್ಚರಿಕೆ ನೀಡಿದ ಡೋನಾಲ್ಡ್‌ ಟ್ರಂಪ್‌

ಇರಾನ್‌–ಇಸ್ರೇಲ್‌ ನಡುವಿನ ಸಂಘರ್ಷಕ್ಕೆ ದೊಡ್ಡಣ್ಣ ಎಂಟ್ರಿ: ಇರಾನ್ ಅಣುಸ್ಥಾವರಗಳ ಮೇಲೆ ಅಮೆರಿಕಾ ಏರ್‌ ಸ್ಟ್ರೈಕ್‌

ವಿಮಾನಗಳಲ್ಲಿ ಯಾಕೆ ಹೀಗಾಗುತ್ತಿದೆ, ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶವಾಯಿತು ಇಂಡಿಗೋ ವಿಮಾನ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಮುಂದಿನ ಸುದ್ದಿ
Show comments