Webdunia - Bharat's app for daily news and videos

Install App

ಇರಾನ್ ಮೇಲೆ ಅಮೆರಿಕಾ ಏರ್‌ಸ್ಟೈಕ್‌: ವಿಶ್ವದ ಶಾಂತಿ, ಭದ್ರತೆಗೆ ನೇರ ಬೆದರಿಕೆ ಎಂದು ಜಾಡಿಸಿದ ವಿಶ್ವಸಂಸ್ಥೆ

Sampriya
ಭಾನುವಾರ, 22 ಜೂನ್ 2025 (11:49 IST)
Photo Credit X
ವಿಶ್ವಸಂಸ್ಥೆ: ಇರಾನ್‌ನ ಅಣುಸ್ಥಾವರಗಳ ಮೇಲೆ ಅಮೆರಿಕ ನಡೆಸಿರುವ ಏರ್‌ಸ್ಟ್ರೇಕ್‌ ಅನ್ನು ವಿಶ್ವಸಂಸ್ಥೆ ತೀವ್ರವಾಗಿ ಖಂಡಿಸಿದ್ದು, ಇದು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ನೇರ ಬೆದರಿಕೆಯಾಗಿದೆ ಎಂದು ಎಚ್ಚರಿಸಿದೆ. 

ಇಸ್ರೇಲ್-ಇರಾನ್ ನಡುವಿನ ಸಂಘರ್ಷದಲ್ಲಿ ಇದೀಗ ಅಮೆರಿಕಾ ಎಂಟ್ರಿಯಾಗಿದೆ. ಇಸ್ರೇಲ್‌ಗೆ ಬೆನ್ನೆಲುಬಾಗಿ ನಿಂತಿರುವ ಅಮೆರಿಕಾ ಶನಿವಾರ ರಾತ್ರಿ ಇರಾನ್‌ನ ಮೂರು ಪರಮಾಣು ಸ್ಥಾವರಗಳನ್ನು ಉಡೀಸ್‌ ಮಾಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪಬಹುದು ಎಂದು ಆತಂಕ ವ್ಯಕ್ತಪಡಿಸಿದೆ. 

ಇರಾನ್ ಮೇಲೆ ಅಮೆರಿಕಾ ಬಲಪ್ರಯೋಗ ತೀವ್ರ ಆಘಾತ ತಂದಿದೆ. ಈಗಾಗಲೇ ಸಂಘರ್ಷದಲ್ಲಿರುವ ಪ್ರದೇಶದಲ್ಲಿ ಈ ಬೆಳವಣಿಗೆ ಪರಿಸ್ಥಿತಿ ನಿಯಂತ್ರಣ ತಪ್ಪುವಂತೆ ಮಾಡಲಿದೆ. ಇದು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ನೇರ ಬೆದರಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಉದ್ವಿಗ್ನ ಪರಿಸ್ಥಿತಿಯು ನಿಯಂತ್ರಣ ತಪ್ಪುವ ಅಪಾಯವನ್ನು ಹೆಚ್ಚಿಸುತ್ತಿದೆ. ನಾಗರಿಕರ ಮತ್ತು ಜಗತ್ತಿನ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತದೆ. ಹೀಗಾಗಿ ಸದಸ್ಯ ರಾಷ್ಟ್ರಗಳು ಉಲ್ಬಣವನ್ನು ಕಡಿಮೆ ಮಾಡಲು ಮತ್ತು ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತರರಾಷ್ಟ್ರೀಯ ಕಾನೂನಿನ ಇತರ ನಿಯಮಗಳ ಅಡಿಯಲ್ಲಿ ತಮ್ಮ ಬಾಧ್ಯತೆಗಳನ್ನು ಎತ್ತಿಹಿಡಿಯಬೇಕು. ಮುಂದಿನ ಏಕೈಕ ಮಾರ್ಗ ರಾಜತಾಂತ್ರಿಕತೆಯಾಗಿದೆ ಎಂದು ಒತ್ತಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸ್ನೇಹಿತರೊಂದಿಗೆ ತೋಟದ ಮನೆಗೆ ಪಾರ್ಟಿಗೆ ತೆರಳಿದ್ದ ಯುವಕರಿಬ್ಬರು ಕೃಷಿಹೊಂಡದಲ್ಲಿ ಜಲಸಮಾಧಿ

ಏರ್‌ಸ್ಟ್ರೈಕ್‌ಗೆ ಕ್ಯಾರೇ ಎನ್ನದ ಇರಾನ್‌: ಇಸ್ರೇಲ್‌ ಮೇಲೆ ಮಿಸೈಲ್‌ಗಳ ಸುರಿಮಳೆ, ಗಗನಚುಂಬಿ ಕಟ್ಟಡಗಳಿಗೆ ಹಾನಿ

ಇರಾನ್ ಮೇಲೆ ಅಮೆರಿಕಾ ಏರ್‌ಸ್ಟೈಕ್‌: ವಿಶ್ವದ ಶಾಂತಿ, ಭದ್ರತೆಗೆ ನೇರ ಬೆದರಿಕೆ ಎಂದು ಜಾಡಿಸಿದ ವಿಶ್ವಸಂಸ್ಥೆ

Karnataka weather: ಕರಾವಳಿ, ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್‌

ಇರಾನ್‌ ಮೇಲೆ ಅಮೆರಿಕಾ ಏರ್‌ಸ್ಟ್ರೇಕ್: ಮತ್ತಷ್ಟು ದಾಳಿಯ ಎಚ್ಚರಿಕೆ ನೀಡಿದ ಡೋನಾಲ್ಡ್‌ ಟ್ರಂಪ್‌

ಮುಂದಿನ ಸುದ್ದಿ
Show comments