Select Your Language

Notifications

webdunia
webdunia
webdunia
webdunia

ಮಹಿಳೆಯ ಶಿಲ್ಪದ ಸ್ತನಗಳನ್ನು ಮುಚ್ಚಿ ವಿವಾದಕ್ಕೀಡಾದ ಇಂಡೋನೇಷ್ಯಾ ಸರ್ಕಾರ

ಮಹಿಳೆಯ ಶಿಲ್ಪದ ಸ್ತನಗಳನ್ನು ಮುಚ್ಚಿ ವಿವಾದಕ್ಕೀಡಾದ ಇಂಡೋನೇಷ್ಯಾ ಸರ್ಕಾರ
ಜಕಾರ್ತ , ಶುಕ್ರವಾರ, 29 ಮಾರ್ಚ್ 2019 (09:35 IST)
ಜಕಾರ್ತ: ಸ್ತ್ರೀಯ ಸುಂದರ ಶಿಲ್ಪವನ್ನು ಕಲೆ ಎಂಬ ದೃಷ್ಟಿಯಿಂದ ವೀಕ್ಷಿಸಿ ಜನರು ಸಂತೋಷಪಡುತ್ತಾರೆ. ಆದರೆ ಇಂಡೋನೇಷ್ಯಾ ಸರ್ಕಾರ ಇಂತಹ ಸುಂದರ ಶಿಲ್ಪವೊಂದರ ಎದೆಭಾಗವನ್ನು ಮುಚ್ಚಿ ವಿವಾದಕ್ಕೀಡಾಗಿದೆ.


ಇಂಡೋನೇಷ್ಯಾದ ಥೀಮ್ ಪಾರ್ಕ್ ಒಂದರಲ್ಲಿ 15 ವರ್ಷಗಳಿಂದಲೂ ಮಹಿಳೆಯ ಸುಂದರ ಶಿಲ್ಪವೊಂದಿದೆ. ಈ ಶಿಲ್ಪ ಇದುವರೆಗೆ ಬೆತ್ತಲಾಗಿಯೇ ಇತ್ತು. ಆದರೆ ಈಗ ಸರ್ಕಾರ ಇದ್ದಕ್ಕಿದ್ದ ಹಾಗೆ ಶಿಲ್ಪದ ಸ್ತನದ ಭಾಗಕ್ಕೆ ಚಿನ್ನದ ಬಣ್ಣದ ಬಟ್ಟೆ ಮುಚ್ಚಿ ಟೀಕೆಗೆ ಗುರಿಯಾಗಿದೆ. ಇದು ಕುಟುಂಬ ಸಮೇತವಾಗಿ ಬರುವ ಜನರಿಗೆ ಮುಜುಗರವುಂಟುಮಾಡಬಹುದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸಮಜಾಯಿಷಿ ನೀಡಿದೆ.

ಆದರೆ ಇಷ್ಟು ದಿನ ಇಲ್ಲದ ಮುಜುಗರ ಈಗ ಹೇಗೆ ಸೃಷ್ಟಿಯಾಗುತ್ತದೆ? ಇದುವರೆಗೆ ಈ ಶಿಲ್ಪವನ್ನು ಕಲೆಯ ದೃಷ್ಟಿಯಿಂದಲೇ ನೋಡುತ್ತಿದ್ದೆವು ಹೊರತು, ಅಶ್ಲೀಲ ದೃಷ್ಟಿಯಿಂದ ಅಲ್ಲ ಎನ್ನುವುದು ಜನರ ವಾದವಾಗಿದೆ. ಅಂತೂ ಎದೆ ಭಾಗಕ್ಕೆ ಬಟ್ಟೆ ಮುಚ್ಚಿ ಸರ್ಕಾರ ವಿವಾದಕ್ಕೆ ಗುರಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಆತನಿಗೆ ಅಂಟುರೋಗವಿದೆ; ಹಾಸಿಗೆ ಸುಖ ನೀಡಲೇ?