Select Your Language

Notifications

webdunia
webdunia
webdunia
webdunia

ಭಾರತ ಮೂಲದ ಸಂಸದೆಗೆ ಬೆದರಿಕೆ!

ಭಾರತ ಮೂಲದ ಸಂಸದೆಗೆ ಬೆದರಿಕೆ!
ವಾಷಿಂಗ್ಟನ್ , ಶನಿವಾರ, 10 ಸೆಪ್ಟಂಬರ್ 2022 (13:55 IST)
ವಾಷಿಂಗ್ಟನ್ : ಭಾರತೀಯ-ಅಮೆರಿಕನ್ ಸಂಸದೆ ಪ್ರಮಿಳಾ ಜಯಪಾಲ್ ಅವರಿಗೆ ವ್ಯಕ್ತಿಯೊಬ್ಬ ʼಭಾರತಕ್ಕೆ ವಾಪಸ್ ಹೋಗಿʼ ಎಂದು ಬೆದರಿಕೆ ಒಡ್ಡಿದ್ದಾನೆ.
 
ಚೆನ್ನೈ ಮೂಲದ ಜಯಪಾಲ್ ಅವರನ್ನು ನಿಂದಿಸಿ ಆ ವ್ಯಕ್ತಿ ಐದು ಆಡಿಯೋ ಸಂದೇಶಗಳ ಕಳುಹಿಸಿದ್ದಾನೆ.

ಸಂದೇಶಗಳಲ್ಲಿ ಅಶ್ಲೀಲ ಪದಗಳನ್ನು ಸಹ ಬಳಸಲಾಗಿದೆ. ಸಂಸದೆ ಪ್ರಮಿಳಾಗೆ ಬೆದರಿಕೆ ಒಡ್ಡಲಾಗಿದೆ. ಅಲ್ಲದೇ ತವರು ದೇಶ ಭಾರತಕ್ಕೆ ವಾಪಸ್ ಹೋಗುವಂತೆ ಸಂದೇಶದಲ್ಲಿ ಒತ್ತಾಯಿಸಿದ್ದಾನೆ. ಆ ಆಡಿಯೋ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. 

ಜಯಪಾಲ್ (55) US ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಸಿಯಾಟಲ್ ಅನ್ನು ಪ್ರತಿನಿಧಿಸುವ ಮೊದಲ ಭಾರತೀಯ-ಅಮೆರಿಕನ್ ಕಾಂಗ್ರೆಸ್ ಮಹಿಳೆಯಾಗಿದ್ದಾರೆ.

ತಮಗೆ ಎದುರಾಗಿರುವ ನಿಂದನೆ ಹಾಗೂ ಬೆದರಿಕೆ ಕುರಿತು ಪ್ರತಿಕ್ರಿಯಿಸಿರುವ ಜಯಪಾಲ್, ಸಾಮಾನ್ಯವಾಗಿ ರಾಜಕೀಯ ವ್ಯಕ್ತಿಗಳು ತಮ್ಮ ದುರ್ಬಲತೆಯನ್ನು ತೋರಿಸಿಕೊಳ್ಳುವುದಿಲ್ಲ. ಹಿಂಸಾಚಾರವನ್ನು ನಮ್ಮ ಹೊಸ ರೂಢಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲದ ಕಾರಣ ನಾನು ಇಲ್ಲಿ ಹಾಗೆ ಮಾಡಲು ನಿರ್ಧರಿಸಿದೆ.

ಈ ಹಿಂಸಾಚಾರಕ್ಕೆ ಆಧಾರವಾಗಿರುವ ಮತ್ತು ಪ್ರೇರೇಪಿಸುವ ವರ್ಣಭೇದ ನೀತಿ ಮತ್ತು ಲಿಂಗಭೇದವನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಜಯಪಾಲ್ ಟ್ವೀಟ್ನಲ್ಲಿ ತಿಳಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಇಂಡಿಗೋ ಸಿಬ್ಬಂದಿಯಿಂದ ಅಚಾತುರ್ಯ?