Select Your Language

Notifications

webdunia
webdunia
webdunia
webdunia

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ಮಹಿಳೆಗೆ ಜನಾಂಗಿಯ ನಿಂದನೆ

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ಮಹಿಳೆಗೆ ಜನಾಂಗಿಯ ನಿಂದನೆ
Newyork , ಶುಕ್ರವಾರ, 3 ಮಾರ್ಚ್ 2017 (19:12 IST)
ಕನ್ಸಾಸ್`ನಲ್ಲಿ ತೆಲಂಗಾಣ ಮೂಲದ ವ್ಯಕ್ತಿಯ ಹತ್ಯೆ ಪ್ರಕರಣ ಹಸಿರಾಗಿರುವಾಗಲೇ ಅಮೆರಿಕದಿಂದ ಮತ್ತೊಂದು ಜನಾಂಗೀಯ ನಿಂದನೆ ಪ್ರಕರಣ ವರದಿಯಾಗಿದೆ. ನ್ಯೂಯಾರ್ಕ್`ನಲ್ಲಿ ವಾಸವಿರುವ 23 ವರ್ಷದ ಏಕ್ತಾ ದೇಸಾಯಿ ಎಂಬ ಮಹಿಳೆ ಮೇಲೆ ಆಫ್ರಿಕನ್-ಅಮೆರಿಕನ್ ವ್ಯಕ್ತಿ ಜನಾಂಗೀಯ ದಾಳಿ ನಡೆಸಿದ್ದಾನೆ.  ಗೆಟ್ ಔಟ್ ಆಫ್ ಹಿಯರ್’ ಎಂದು ಭಾರತೀಯ ಮಹಿಳೆ ಮೇಲೆ ಕೂಗಾಡಿ, ಕಿರುಚಾಡಿದ್ದಾನೆ.


ಫೆಬ್ರವರಿ 23ರಂದು ಈ ಘಟನೆ ನಡೆದಿದ್ದು, ಸ್ವತಃ ನಿಂದನೆ ಅನುಭವಿಸಿದ ಏಕ್ತಾ ಈ ವಿಡಿಯೋ ಮಾಡಿದ್ದಾರೆ. ದಿ ವಾಯ್ಸ್ ರೈಸರ್ ವೆಬ್`ಸೈಟ್`ನಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು, ವೈರಲ್ ಆಗಿದೆ.


ವಿಡಿಯೋದಲ್ಲಿ ಅಮೆರಿಕದ ವ್ಯಕ್ತಿ ಜೋರಾಗಿ ಕಿರುಚುತ್ತಿದ್ದು, ಇದು ನಮ್ಮ ಫ್ರೀಡಂ ಆಫ್ ಸ್ಪೀಚ್, ಬ್ಲಾಕ್ ಪವರ್, ಗೆಟ್ ಔಟ್ ಫ್ರಮ್ ಹಿಯರ್ ಎಂದು ಎಗರಾಡಿದ್ದಾನೆ.ವಿಡಿಯೋ ರೆಕಾರ್ಡ್ ಮಾಡುತ್ತಿದ್ದನ್ನ ಗಮನಿಸಿದ ಆತ ಮತ್ತಷ್ಟು ವ್ಯಗ್ರನಾಗಿದ್ದಾನೆ.

ಈ ಕುರಿತು ಪ್ರತಿಕ್ರಿಯಿಸಿರುವ ಏಕ್ತಾ, 100 ಪ್ರಯಾಣಿಕರಿದ್ದ ರೈಲಿನಲ್ಲಿ ಆತನೂ ನಮ್ಮ ಜೊತೆಗಿದ್ದ. ನಾನು ಎಂದಿನಂತೆ ಕಿವಿಗೆ ಹೆಡ್ ಫೋನ್ ಹಾಕಿಕೊಂಡು ಕುಳಿತಿದ್ದೆ. ಆತ ನನ್ನನ್ನ ನೋಡಿ ಕಿರುಚಾಡುತ್ತಿದ್ದದ್ದು  ಗಮನಕ್ಕೆ ಬಂದಿತ್ತು. ಆದರೂ ನಾನು ತಲೆಕೆಡಿಸಿಕೊಳ್ಲಲಿಲ್ಲ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ, ರಸ್ತೆಗಳಲ್ಲಿ ಸಿಎಂ, ಸಚಿವರ ಮಾನ ಹರಾಜು ಹಾಕ್ತೇನೆ: ಯಡ್ಡಿ ಗುಡುಗು