Select Your Language

Notifications

webdunia
webdunia
webdunia
webdunia

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಭಾರತೀಯನ ಬಂಧನ

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಭಾರತೀಯನ ಬಂಧನ
ಇಸ್ಲಾಮಾಬಾದ್ , ಭಾನುವಾರ, 21 ಮೇ 2017 (17:38 IST)
ಅಗತ್ಯ ದಾಖಲಾತಿಗಳಿಲ್ಲ ಎನ್ನುವ ಕಾರಣವೊಡ್ಡಿ ಪಾಕಿಸ್ತಾನದ ಪೊಲೀಸರು ಭಾರತೀಯನನ್ನು ಬಂಧಿಸಿದ್ದಾರೆ. 
 
ಭಾರತೀಯ ನಾಗರಿಕನನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. 
 
ಬಂಧಿತ ಭಾರತೀಯ ಮುಂಬೈ ಮೂಲದ ಶೇಖನಬಿ ಎಂದು ಗುರುತಿಸಲಾಗಿದ್ದು, ಅಗತ್ಯ ದಾಖಲೆಗಳಿಲ್ಲದಿದ್ದರಿಂದ ಬಂಧಿಸಲಾಗಿದೆ ಎಂದು ಪಾಕ್ ಪೊಲೀಸರು ತಿಳಿಸಿದ್ದಾರೆ.
 
ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು, ಭಾರತೀಯ ನಾಗರಿಕ ಶೇಖ್‌ನಬಿ ಅವರ ದಾಖಲೆಗಳನ್ನು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಉಸಿರು ಇರುವವರೆಗೂ ಬಿಜೆಪಿ ಪಕ್ಷ ಬಿಡುವುದಿಲ್ಲ: ಜನಾರ್ದನ ರೆಡ್ಡಿ