Select Your Language

Notifications

webdunia
webdunia
webdunia
webdunia

ಪತ್ನಿಯ ಪ್ರಿಯಕರನಿಂದ ಭಾರೀ ಮೊತ್ತದ ಪರಿಹಾರವನ್ನು ಪಡೆದ ಪತಿ. ಕಾರಣವೇನು ಗೊತ್ತಾ?

ಪತ್ನಿಯ ಪ್ರಿಯಕರನಿಂದ ಭಾರೀ ಮೊತ್ತದ ಪರಿಹಾರವನ್ನು ಪಡೆದ ಪತಿ. ಕಾರಣವೇನು ಗೊತ್ತಾ?
ಅಮೇರಿಕಾ , ಶನಿವಾರ, 5 ಅಕ್ಟೋಬರ್ 2019 (08:47 IST)
ಅಮೇರಿಕಾ: ವ್ತಕ್ತಿಯೊಬ್ಬ ತನ್ನ ವೈವಾಹಿಕ ಜೀವನ ಮುರಿದು ಬೀಳಲು ಕಾರಣನಾದ ಪತ್ನಿ ಪ್ರಿಯಕರನಿಂದ ಭಾರೀ ಮೊತ್ತದ ಪರಿಹಾರವನ್ನು ಪಡೆದುಕೊಂಡ ಘಟನೆ ಅಮೇರಿಕಾದಲ್ಲಿ ನಡೆದಿದೆ.




ಅಮೆರಿಕಾದ ಪ್ರಜೆ ಕೆವಿನ್ ಹೊವಾರ್ಡ್ ಎಂಬುವವರ ಪತ್ನಿ, ಪತಿ ನನಗೆ ಹೆಚ್ಚು ಸಮಯ ನೀಡುತ್ತಿಲ್ಲ ಬರೀ ಕೆಲಸದಲ್ಲೇ ಇರುತ್ತಾರೆ ಎಂಬ ಕಾರಣ ನೀಡಿ ವಿಚ್ಛೇದನ ಪಡೆಯುವುದರ ಮೂಲಕ ಹನ್ನೆರಡು ವರ್ಷದ ವೈವಾಹಿಕ ಜೀವನಕ್ಕೆ ಎಳ್ಳುನೀರು ಬಿಟ್ಟಿದ್ದಾಳೆ.


ಆ ಬಳಿಕ ಸುಮ್ಮನಾಗದ ಪತಿ, ತನ್ನಪತ್ನಿ ಸಹೋದ್ಯೋಗಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ತನಗೆ ಮೋಸ ಮಾಡಿದ್ದಾಳೆ ಎಂಬುದು ತಿಳಿದು ಪತ್ನಿ ಹಾಗೂ ಆಕೆಯ ಲವರ್ ವಿರುದ್ಧ ಮೊಕದ್ದಮೆ ಹೂಡಿದ್ದಾನೆ. ಈ ಪ್ರಕರಣದ ವಿಚಾರಣೆ ನಡೆಸಿದ ಅಮೇರಿಕಾದ ಉತ್ತರ ಕೆರೊಲಿನ ನ್ಯಾಯಾಧೀಶರು, ಎಲಿಯೆಷನ್ ಆಫ್ ಅಫೆಕ್ಷನ್ ಅಡಿ ವಂಚನೆ ಮಾಡಿದ ವ್ಯಕ್ತಿಗೆ 7,50,000 ಅಮೆರಿಕನ್ ಡಾಲರ್ ದಂಡ ವಿಧಿಸಿ ಈತನಿಗೆ ಪರಿಹಾರವಾಗಿ ಕೊಡಬೇಕೆಂದು ತೀರ್ಪು ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಟೋಲ್ ಪಾವತಿಸಲು ಹೊಸ ವ್ಯವಸ್ಥೆ ಜಾರಿಗೊಳಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ