ಕನಸಿನಲ್ಲಿ ಕಳ್ಳರಿಂದ ನಿಶ್ಚಿತಾರ್ಥದ ಉಂಗುರ ಉಳಿಸಲು ಹೋಗಿ ಮಹಿಳೆ ಮಾಡಿದ್ದೇನು ಗೊತ್ತಾ?

ಮಂಗಳವಾರ, 17 ಸೆಪ್ಟಂಬರ್ 2019 (11:30 IST)
ಅಮೇರಿಕಾ : ಮಹಿಳೆಯೊಬ್ಬಳು ಕನಸಿನಲ್ಲಿ ಪತಿ ಹಾಕಿದ ಉಂಗುರವನ್ನು ರಕ್ಷಿಸಲು ಹೋಗಿ ಅದನ್ನು ನುಂಗಿದ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಕನಸಿನಲ್ಲಿ ತನ್ನ ಭಾವಿ ಪತಿ ಜೊತೆ ಟ್ರೈನ್​ ನಲ್ಲಿ ಹೋಗುತ್ತಿರುವಾಗ ಕಳ್ಳರು ಎದುರಾಗಿದ್ದು, ಅವರಿಂದ ಉಂಗುರವನ್ನ ರಕ್ಷಿಸಲು ಆಕೆ ಅದನ್ನು ನುಂಗಿದ್ದಾಳೆ. ಆದರೆ ಬೆಳಿಗ್ಗೆ ಎದ್ದು ನೋಡಿದಾಗ  ಬೆರಳಿನಲ್ಲಿ ಉಂಗುರ ಇರಲಿಲ್ಲ. ತಕ್ಷಣ ಎಚ್ಚೆತ್ತ ಮಹಿಳೆ ತಾವು ನಿಜವಾಗಿಯು ಉಂಗುರ ನುಂಗಿರುವುದು ತಿಳಿದುಬಂದಿದೆ.


ತಕ್ಷಣ ವೈದ್ಯರ ಬಳಿ ಹೋಗಿ ಎಕ್ಸ್​ರೇ ಮಾಡಿಸಿಕೊಂಡಾಗ ಈ ವಿಷಯ ಬೆಳಕಿಗೆ ಬಂದಿದೆ, ಆಕೆಯ  ಹೊಟ್ಟೆಯಿಂದ ಉಂಗುರವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ. ಇನ್ನು ಈ ಬಗ್ಗೆ ಮಹಿಳೆ ಫೇಸ್​ ಬುಕ್​ನಲ್ಲಿ ಪೋಸ್ಟ್​ ಮಾಡಿದ್ದು, ಈ ಪೋಸ್ಟ್​ ಸಖತ್​ ವೈರಲ್​ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಮುಂದೂಡಿಕೆ. ಕಾರಣವೇನು ಗೊತ್ತಾ?