ಜನನಾಂಗದಲ್ಲಿ ಲೋಹದ ನಟ್ ಸಿಲುಕಿಕೊಂಡು ಆಸ್ಪತ್ರೆ ಸೇರಿದ ವ್ಯಕ್ತಿ

ಶುಕ್ರವಾರ, 16 ಆಗಸ್ಟ್ 2019 (10:19 IST)
ಹಾಂಗ್ ಕಾಂಗ್ : ವ್ಯಕ್ತಿಯೊಬ್ಬನ ಜನನಾಂಗದಲ್ಲಿ ದೊಡ್ಡ ಲೋಹದ ನಟ್ ವೊಂದು ಸಿಲುಕಿಕೊಂಡ ಹಿನ್ನಲೆ ಆಸ್ಪತ್ರೆಗೆ ದಾಖಲಾದ ಘಟನೆ ಹಾಂಗ್ ಕಾಂಗ್ ನಲ್ಲಿ ನಡೆದಿದೆ.
34 ವರ್ಷದ ವ್ಯಕ್ತಿಯೊಬ್ಬ ಹಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದು ಹಾಂಗ್ ಕಾಂಗ್ ನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ. ಎಷ್ಟೇ ಚಿಕಿತ್ಸೆ ನೀಡಿದರೂ ಆತನ ಜ್ವರ ಕಡಿಮೆಯಾದ ಹಿನ್ನಲೆಯಲ್ಲಿ ವೈದ್ಯರು ಆತನನ್ನ ತಪಾಸಣೆ ಮಾಡಿದ್ದಾರೆ. ಆಗ ಆತನ ಜನನಾಂಗದಲ್ಲಿ ದೊಡ್ಡ ನಟ್ ಇರುವುದು ಕಂಡು ಬಂದಿತು.


ಲೋಹದ ನಟ್ ತೆಗೆಯುವುದು ಬಾರೀ ಕಷ್ಟಕರವಾಗಿದ್ದರಿಂದ ವೈದ್ಯರು ಡೈಮಂಡ್ ಡಿಸ್ಕ್ ಕಟ್ಟರ್ ಮೂಲಕ ನಟ್ ಅನ್ನು ಕತ್ತರಿಸಿ ಹೊರತೆಗೆದಿದ್ದಾರೆ. ಈ ಬಗ್ಗೆ ನಿಯತಕಾಲಿಕೆಯೊಂದು  ವರದಿ ಮಾಡಿದೆ. ಶಸ್ತ್ರಚಿಕಿತ್ಸೆ ನಂತರ ಆತನನ್ನು ಐದು ದಿನಗಳವರೆಗೆ ಆಸ್ಪತ್ರೆಯಲ್ಲೇ ಇರಿಸಿಕೊಳ್ಳಲಾಗಿದೆ. ಆದರೆ ಆ ವ್ಯಕ್ತಿಯ ಜನನಾಂಗ ಸಾಮಾನ್ಯ ರೀತಿಯಲ್ಲಿ ನಿಮಿರುತ್ತಿದ್ದರೂ ಕೂಡ ಆತ 'ಲೈಂಗಿಕ ಕ್ರಿಯೆ'ಯಲ್ಲಿ ತೊಡಗುವಂತಿಲ್ಲ. 
 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಉ-ಕ ನೆರೆ ಸಂತ್ರಸ್ಥರಿಗೆ ಖಡಕ್ ರೊಟ್ಟಿ, ಚಪಾತಿ, ಚಟ್ನಿ ಪುಡಿ ಕಳಿಸೋದ್ಯಾರು?