Webdunia - Bharat's app for daily news and videos

Install App

ಮಗಳಿಗೆ ಇಂಡಿಯಾ ಎಂದು ಹೆಸರಿಟ್ಟ ಖ್ಯಾತ ಹಾಲಿವುಡ್ ನಟ. ಕಾರಣವೇನು ಗೊತ್ತಾ?

Webdunia
ಬುಧವಾರ, 12 ಜೂನ್ 2019 (06:22 IST)
ಬಾಲಿ : ಭಾರತೀಯರು ವಿದೇಶಗಳತ್ತ ಮನಸೋಲುತ್ತಿರುವಾಗ ಹಾಲಿವುಡ್ ನಟನೊಬ್ಬ ಭಾರತದ ಮೇಲಿನ ಪ್ರೀತಿಗೆ ತಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಡುವುದರ ಮೂಲಕ ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.




ಹೌದು. ಹಾಲಿವುಡ್‍ ನ ಖ್ಯಾತ ಎವೆಂಜರ್ಸ್ ಚಿತ್ರಗಳಲ್ಲಿ ಥಾರ್ ಪಾತ್ರದಲ್ಲಿ ಮಿಂಚಿ ಖ್ಯಾತಿ ಪಡೆದ ಹಾಲಿವುಡ್ ಖ್ಯಾತ ನಟ ಕ್ರಿಸ್ ಹೆಮ್ಸ್‌ವರ್ಥ್ ಭಾರತದ ಮೇಲೆ ಇವರು ವಿಶೇಷ ವಾದ ಒಲವನ್ನು ಇಟ್ಟುಕೊಂಡಿದ್ದು, ಹೀಗಾಗಿ ತಮ್ಮ ಮುದ್ದಿನ ಮಗಳಿಗೆ ಇಂಡಿಯಾ ರೋಸ್ ಎಂದು ನಾಮಕರಣ ಮಾಡಿದ್ದಾರೆ.


ಈ ಬಗ್ಗೆ ಸ್ವತಃ ಕ್ರಿಸ್ ಅವರೇ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಕಳೆದ ವರ್ಷ ತಮ್ಮ ನೆಟ್‍ಫ್ಲಿಕ್ಸ್ ಪ್ರಾಜೆಕ್ಟ್ `ಧಾಕಾ’ದ ಶೂಟಿಂಗ್‍ ಗಾಗಿ ಭಾರತಕ್ಕೆ ಬಂದಿದ್ದ ವೇಳೆ ಇಲ್ಲಿನ ಅಹಮದಾಬಾದ್ ಮತ್ತು ಮುಂಬೈನಲ್ಲಿ ಚಿತ್ರೀಕರಣ ನಡೆಸಿದ್ದರು. ಆದರೆ ಮೊದಲಿಗೆ ಭಾರತದಲ್ಲಿ ಶೂಟಿಂಗ್ ಮಾಡುವುದಕ್ಕೆ ಆತಂಕವಿದ್ದರೂ, ಅಲ್ಲಿನ ಜನರು ಶೂಟಿಂಗ್ ವೇಳೆ ನಮಗೆ ತೋರಿದ ಪ್ರೀತಿ, ಗೌರವ ನಿಜಕ್ಕೂ ನನಗೆ ಬಹಳ ಇಷ್ಟವಾಗಿತ್ತು ಎಂದು ಕ್ರಿಸ್ ಹೊಗಳಿದ್ದಾರೆ.


ನನ್ನ ಪತ್ನಿ ಎಲ್ಸಾ ಭಾರತದಲ್ಲಿ ಸಾಕಷ್ಟು ಸಮಯ ಕಳೆದಿದ್ದಳು, ಅವಳಿಗೆ ಕೂಡ ಭಾರತ ಅಚ್ಚುಮೆಚ್ಚು ಹೀಗಾಗಿ ನಾವಿಬ್ಬರು ನಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಡಲು ನಿರ್ಧರಿಸಿದೆವು ಎಂದು ತಿಳಿಸಿದ್ದಾರೆ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ಬುರುಡೆ ರಹಸ್ಯ: ಮನಸ್ಸು ಈಗ ಹಗುರವಾಗಿದೆ ಎಂದ ವೀರೇಂದ್ರ ಹೆಗ್ಗಡೆ

ಮಹಾರಾಷ್ಟ್ರ: ದೀಪಾವಳಿಗೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರಿಗೆ ಬಂಪರ್ ಗಿಫ್ಟ್‌

ಸರ್ಕಾರೀ ಗೌರವಗಳೊಂದಿಗೆ ನೆರವೇರಿದ ಎಸ್ ಎಲ್ ಭೈರಪ್ಪ ಅಂತ್ಯಕ್ರಿಯೆ

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಗೆ ಅವಮಾನ ಮಾಡಿ ದರ್ಶನ ಕೊಟ್ಟ ಡೊನಾಲ್ಡ್ ಟ್ರಂಪ್

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments