ಕೆನಡಾ: ದೇವಾಲಯಕ್ಕೆ ನುಗ್ಗಿ ಕೆನಡಾದಲ್ಲಿ ಹಿಂದೂಗಳ ಮೇಲೆ ಸಿಕ್ಕ ಸಿಕ್ಕ ಹಾಗೆ ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದಾರೆ. ಇದನ್ನು ಅಲ್ಲಿನ ರಾಜಕೀಯ ನಾಯಕರು ಖಂಡಿಸಿದ್ದಾರೆ.
ವಿಶೇಷವೆಂದರೆ ಈಗ ಕೆನಡಾ ಮತ್ತು ಭಾರತದ ನಡುವೆ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಅದರ ನಡುವೆಯೇ ಹಿಂದೂಗಳ ಮೇಲೆ ದಾಳಿ ನಡೆದಿರುವುದು ಗಮನಾರ್ಹ ಸಂಗತಿ. ಖಲಿಸ್ತಾನಿ ಉಗ್ರನ ಹತ್ಯೆ ವಿಚಾರವಾಗಿಯೇ ಎರಡೂ ದೇಶಗಳ ನಡುವಿನ ಸಂಬಂಧ ಹಳಸಿತ್ತು. ಇದೀಗ ಖಲಿಸ್ತಾನಿ ಹೋರಾಟಗಾರರಿಂದ ಹಿಂದೂಗಳ ಮೇಲೆ ದಾಳಿಯಾಗಿದೆ.
ಕೆನಡಾದ ಬ್ರಾಂಪ್ಟನ್ ನಲ್ಲಿರುವ ಹಿಂದೂ ಸಭಾ ದೇವಾಲಯದ ಮೇಲೆ ದಾಳಿ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆನಡಾ ಸಂಸದ ಪಿರ್ರೆ ಪೊಲಿವ್ರೆ, ಸಂಸದ ಕೆವಿನ್ ವೂಂಗ್, ಸಂಸದ ಆರ್ಯ ನಾವು ಹಿಂದೂಗಳನ್ನು ರಕ್ಷಿಸುವಲ್ಲಿ ವಿಫಲರಾದೆವು ಎಂದು ಖೇದ ವ್ಯಕ್ತಪಡಿಸಿದ್ದಾರೆ.
ಕೆನಡಾದಲ್ಲಿ ನಡೆದ ಹಿಂದೂಗಳ ಮೇಲಿನ ದಾಳಿ ಖಂಡಿಸಿರುವ ಭಾರತ, ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಹಿಂದೂಗಳ ರಕ್ಷಣೆಗೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದೆ. ಸಂಸದ ಕೆವಿನ್ ದಾಳಿ ಬಗ್ಗೆ ಪ್ರತಿಕ್ರಿಯಿಸಿ ನಮ್ಮ ದೇಶ ಈಗ ತೀವ್ರಗಾಮಿಗಳ ಸ್ವರ್ಗವಾಗಿದೆ. ಇಲ್ಲಿ ಎಲ್ಲಾ ಧರ್ಮದವರೂ ಶಾಂತಿಯುತವಾಗಿ ಬಾಳುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.