Select Your Language

Notifications

webdunia
webdunia
webdunia
webdunia

ತೈಲ ಆಮದಿಗೆ ಮಾತ್ರ ನಿರ್ಬಂಧ!

ತೈಲ ಆಮದಿಗೆ ಮಾತ್ರ ನಿರ್ಬಂಧ!
ವಾಷಿಂಗ್ಟನ್ , ಶುಕ್ರವಾರ, 11 ಮಾರ್ಚ್ 2022 (07:19 IST)
ವಾಷಿಂಗ್ಟನ್ : ಉಕ್ರೇನ್ ಮೇಲೆ ಯುದ್ಧ ಸಾರಿದ್ದಕ್ಕೆ ರಷ್ಯಾದ ಮೇಲೆ ಅಮೆರಿಕ ತೈಲ ಖರೀದಿಗೆ ನಿರ್ಬಂಧ ಹೇರಿದೆ.

ಆದರೆ ಯುರೋನಿಯಂ ಖರೀದಿ ನಿಷೇಧ ಹೇರದೆ ಇರುವ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

ಅಮೆರಿಕ ಅಣು ಸ್ಥಾವರಗಳಿಗೆ ಯುರೋನಿಯಂ ಅಗತ್ಯವಿದೆ. ರಷ್ಯಾ ಹಾಗೂ ಅದರ ಮಿತ್ರರಾಷ್ಟ್ರಗಳಾದ ಕಝಕಿಸ್ತಾನ ಹಾಗೂ ಉಜ್ಬೇಕಿಸ್ತಾನದಲ್ಲಿ ಅತೀ ಹೆಚ್ಚು ಯುರೇನಿಯಂ ಸಿಗುತ್ತಿದ್ದು, ಅಮೆರಿಕ ಕೂಡಾ ಈ ದೇಶಗಳಿಂದಲೇ ಯುರೇನಿಯಂ ಅನ್ನು ಆಮದು ಮಾಡಿಕೊಳ್ಳುತ್ತದೆ.

ಅಮೆರಿಕ ಅಧ್ಯಕ್ಷ ತೈಲ ನಿಷೇಧವನ್ನು ಘೋಷಿಸಿದ ಬಳಿಕ ಶ್ವೇತ ಭವನದಿಂದ ಬಿಡುಗಡೆಯಾದ ದಾಖಲೆಯಲ್ಲಿ ಯುರೇನಿಯಂ ಬಗ್ಗೆ ಯಾವುದೇ ನಿಷೇಧವನ್ನು ಉಲ್ಲೇಖಿಸಿಲ್ಲ ಎಂದು ವರದಿಗಳು ತಿಳಿಸಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್