Select Your Language

Notifications

webdunia
webdunia
webdunia
webdunia

ಎರಡು ನಿಮಿಷ ಬೇಗ ಕಚೇರಿ ಬಿಟ್ಟಿದ್ದಕ್ಕೆ ಸರ್ಕಾರಿ ನೌಕರರ ಸಂಬಳ ಕಟ್!

ಎರಡು ನಿಮಿಷ ಬೇಗ ಕಚೇರಿ ಬಿಟ್ಟಿದ್ದಕ್ಕೆ ಸರ್ಕಾರಿ ನೌಕರರ ಸಂಬಳ ಕಟ್!
ನವದೆಹಲಿ , ಶುಕ್ರವಾರ, 19 ಮಾರ್ಚ್ 2021 (09:35 IST)
ನವದೆಹಲಿ: ಸರ್ಕಾರಿ ಕೆಲಸವೆಂದರೆ ಹತ್ತು ಗಂಟೆಗೆ ಆಫೀಸ್ ಗೆ ಬರೋದು. ಐದು ಗಂಟೆ ಹೊಡೆಯುವ ಮೊದಲೇ ರೈಟ್ ಹೇಳೋದು. ಇದು ಭಾರತದಲ್ಲಿ ಸಾಮಾನ್ಯ. ಆದರೆ ಜಪಾನ್ ನಲ್ಲಿ ಈ ರೀತಿ ಮಾಡಿದ್ದಕ್ಕೆ ಸರ್ಕಾರಿ ನೌಕರರು ತಕ್ಕ ಬೆಲೆಯನ್ನೇ ತೆತ್ತಿದ್ದಾರೆ.


ಮೇ 2019 ರಿಂದ ಜನವರಿ 2021 ರ ಅವಧಿಯಲ್ಲಿ ಅವಧಿ ಮುಗಿಯುವ ಎರಡು ನಿಮಿಷ ಮೊದಲೇ ಕಚೇರಿ ಬಿಟ್ಟಿದ್ದಕ್ಕೆ ಸರ್ಕಾರಿ ನೌಕರರಿಗೆ ವೇತನ ಕಡಿತ ಮಾಡಲಾಗಿದೆ. ಮನೆಗೆ ಹೋಗುವ ಬಸ್ ಹಿಡಿಯಲು 5.15 ಕ್ಕೆ ಕಚೇರಿ ಬಿಡುವ ಬದಲು 5.13 ಕ್ಕೇ ನೌಕರರು ಕೆಲಸ ಮುಗಿಸಿ ಹೊರಟಿದ್ದಾರೆ.

ಶಿಕ್ಷಣ ಇಲಾಖೆಯಲ್ಲೇ ಸುಮಾರು 316 ನೌಕರರು ಈ ರೀತಿ ವೇತನಕ್ಕೆ ಕತ್ತರಿಸಿ ಹಾಕಿಸಿಕೊಂಡಿದ್ದಾರೆ. ಅದರಲ್ಲೂ ಕೆಲವರಿಗೆ ಲಿಖಿತ ಎಚ್ಚರಿಕೆಯನ್ನೂ ನೀಡಲಾಗಿದೆ. ದೊಡ್ಡ ದೊಡ್ಡ ಹುದ್ದೆಯಲ್ಲಿರುವವರನ್ನೂ ಬಿಟ್ಟಿಲ್ಲವಂತೆ!

Share this Story:

Follow Webdunia kannada

ಮುಂದಿನ ಸುದ್ದಿ

ವಿಧವೆಯನ್ನು ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸುತ್ತಿದ್ದ ತಂಗಿಯ ಮಾವ