Select Your Language

Notifications

webdunia
webdunia
webdunia
webdunia

ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ಗೊತಬಯ ರಾಜಪಕ್ಸೆ

ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ಗೊತಬಯ ರಾಜಪಕ್ಸೆ
ಕೊಲಂಬೋ , ಶುಕ್ರವಾರ, 19 ಆಗಸ್ಟ್ 2022 (10:34 IST)
ಕೊಲಂಬೋ : ಕೆಲವು ದಿನಗಳ ಹಿಂದೆ ಶ್ರೀಲಂಕಾದಾದ್ಯಂತ ಭಾರೀ ಪ್ರತಿಭಟನೆ ನಡೆದ ಹಿನ್ನೆಲೆ ಶ್ರೀಲಂಕಾ ತೊರೆದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಅಧ್ಯಕ್ಷ ಗೊತಬಯ ರಾಜಪಕ್ಸೆ ಅಮೆರಿಕದಲ್ಲಿ ನೆಲೆಸಲು ಗ್ರೀನ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿರುವುದಾಗಿ ವರದಿಯಾಗಿದೆ.
 
ರಾಜಪಕ್ಸೆ ಅವರ ಪತ್ನಿ ಹಾಗೂ ಮಗನೊಂದಿಗೆ ಅಮೆರಿಕ ತೆರಳಿ ಅಲ್ಲಿಯೇ ನೆಲೆಸಲು ತಮ್ಮ ವಕೀಲರ ಮೂಲಕ ಗ್ರೀನ್ ಕಾರ್ಡ್ ಪಡೆಯಲು ಕಳೆದ ತಿಂಗಳೇ ಅರ್ಜಿ ಸಲ್ಲಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 

ರಾಜಪಕ್ಸೆ ಅವರು ಶ್ರೀಲಂಕಾ ಸೇನೆಯಿಂದ ಬೇಗನೆ ನಿವೃತ್ತಿ ಪಡೆದು 1998ರಲ್ಲಿ ಅಮೆರಿಕಗೆ ವಲಸೆ ಹೋಗಿದ್ದರು. ಬಳಿಕ 2005ರಲ್ಲಿ ಶ್ರೀಲಂಕಾಗೆ ಮರಳಿದ್ದರು. 2019ರ ಅಧ್ಯಕ್ಷೀಯ ಚುನಾವಣೆಗಾಗಿ ಅವರು ತಮ್ಮ ಅಮೆರಿಕದ ಪೌರತ್ವವನ್ನು ತ್ಯಜಿಸಿದ್ದರು ಎನ್ನಲಾಗಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಮದರಸಾದಲ್ಲಿ ರಾಷ್ಟ್ರಗೀತೆ ಕಡ್ಡಾಯ!