Select Your Language

Notifications

webdunia
webdunia
webdunia
webdunia

29 ದಿನ ನಿರಂತರ ಅತ್ಯಾಚಾರ.. ಕೆರೆಗೆ ಹಾರಿ ಈಜಿ ತಪ್ಪಿಸಿಕೊಂಡ ದಿಟ್ಟ ಯುವತಿ..!

29 ದಿನ ನಿರಂತರ ಅತ್ಯಾಚಾರ.. ಕೆರೆಗೆ ಹಾರಿ ಈಜಿ ತಪ್ಪಿಸಿಕೊಂಡ ದಿಟ್ಟ ಯುವತಿ..!
ನ್ಯೂಯಾರ್ಕ್ , ಶುಕ್ರವಾರ, 8 ಸೆಪ್ಟಂಬರ್ 2017 (19:25 IST)
ಅಮೆರಿಕದ ಮಿನ್ನೆಸೋಟಾ ಗ್ರಾಮದ ರೈತ ಅಂದು ತನ್ನ ಹೊಲದ ಕಡೆ ಹೊರಟಿದ್ದಾಗ ದೋರದಲ್ಲಿ ಹುಲ್ಲಿನ ಮಧ್ಯೆ ಏನೋ ಇದ್ದಂತೆ ಭಾಸವಾಗುತ್ತದೆ. ಅದು ಜಿಂಕೆ ಇರಬಹುದೆಂದು ರೈತ ಭಾವಿಸುತ್ತಾನೆ. ಆದರೆ, ಅಲ್ಲಿದ್ದದ್ದು ಜಿಂಕೆಯಲ್ಲ, ಒಬ್ಬ ಹದಿಹರೆಯದ ಹುಡುಗಿ.
 

ರೈತನನ್ನ ಕಂಡಿದ್ದೇ ತಡ ಪ್ಯಾಂಟ್, ಚಪ್ಪಲಿ ಹಾಕದ ಆ ಹುಡುಗಿ ಸಮೀಪಕ್ಕೆ ಬಂದು ನಿಂತಳು. ಆಕೆಯನ್ನ ಕಂಡ ರೈತನಿಗೆ ಗುರುತು ಸಿಕ್ಕಿತ್ತು. ನೀನು ನನ್ನನ್ನ ಛೇಡಿಸಲು ಇಲ್ಲಿ ಬಂದಿದ್ದೀಯಾ. ತಿಂಗಳ ಹಿಂದೆ ಅಲೆಗ್ಯಾಂಡ್ರಿಯಾದಿಂದ ನಾಪತ್ತೆಯಾದ ಹುಡುಗಿ ನೀನೇ ತಾನೇ ಎಂದು ರೈತ ಪ್ರಶ್ನಿಸಿದ. ಇದಕ್ಕೆ ಆಕೆ ಹೌದು ಎಂದು ಉತ್ತರಿಸಿದಳು. ತನ್ನನ್ನ ಅಪಹರಣ ಮಾಡಿದ್ದಾರೆ 911ಗೆ ಕರೆ ಮಾಡಿ ಎಂದು ಕೇಳಿದ್ದಾಳೆ.

ಪೊಲೀಸರು ಹೇಳುವ ಪ್ರಕಾರ, 29 ದಿನಗಳ ಹಿಂದೆ ಯುವತಿಯನ್ನ ಕಿಡ್ನ್ಯಾಪ್ ಮಾಡಿ ಕೆರೆಯ ಮೊಬೈಲ್ ಹೌಸ್`ನಲ್ಲಿ ಬಂಧಿಸಿಟ್ಟು, ಗನ್ ಪಾಯಿಂಟ್`ನಲ್ಲಿ ನಿರಂತರ ರೇಪ್ ಮಾಡಲಾಗಿದೆ. ಒಂದು ದಿನ ಆಕೆಯನ್ನ ಒಂಟಿಯಾಗಿ ಬಿಟ್ಟಾಗ ಅದ್ಯಾಗೋ ತಪ್ಪಿಸಿಕೊಂಡ ಹುಡುಗಿ ನದಿಯಲ್ಲಿ ಈಜಿ ತಡ ಸೇರಿದ್ದಾಳೆ. 150 ಎಕರೆ ಪ್ರದೇಶದ ಕೆರೆಯಲ್ಲಿ ಈಜಿ ದಡ ಸೇರಿದ್ದಾಳೆ. ವಸತಿ ಪ್ರದೇಶವನ್ನ ಹುಡುಕುತ್ತಾ ಹೊಲದಲ್ಲಿ ಓಡಿದ್ದಾಳೆ. ಕೊನೆಗೆ ರೈತನೊಬ್ಬನ ನೆರವು ಸಿಕ್ಕಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿದ ಬಳಿಕ ಸಮೀಪದಲ್ಲೇ ಇದ್ದ ಅಪಹರಣಕಾರನ ವಾಹನವೊಂದನ್ನ ಯುವತಿ ಪತ್ತೆ ಹಚ್ಚಿದ್ದಾಳೆ. ಅಷ್ಟೊತ್ತಿಗೆ ಕಾರಿನ ಬಳಿಗೆ ಬಂದ ಕಾಮುಕನನ್ನ ಪೊಲೀಸರು ಹಿಡಿದಾಗ ಸಂಪೂರ್ಣ ವೃತ್ತಾಂತ ಬಾಯ್ಬಿಟ್ಟಿದ್ದಾನೆ. ಈತನ ಜೊತೆ ಮೂವರು ಕಾಮುಕರನ್ನ ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಚಾರವಾದಿಗಳ ಹತ್ಯೆ ತೀವ್ರ ಖಂಡನೀಯ: ಸಲ್ಮಾನ್ ಖುರ್ಷಿದ್