Select Your Language

Notifications

webdunia
webdunia
webdunia
webdunia

ಕಾರುಗಳಿಗೆ ಚಾಟ್‌ಜಿಪಿಟಿ ಅಳವಡಿಸಲು ಜನರಲ್ ಮೋಟರ್ಸ್ ಚಿಂತನೆ

ಕಾರುಗಳಿಗೆ ಚಾಟ್‌ಜಿಪಿಟಿ ಅಳವಡಿಸಲು ಜನರಲ್ ಮೋಟರ್ಸ್ ಚಿಂತನೆ
ವಾಷಿಂಗ್ಟನ್ , ಭಾನುವಾರ, 12 ಮಾರ್ಚ್ 2023 (12:24 IST)
ವಾಷಿಂಗ್ಟನ್ : ಅಮೆರಿಕದ ಪ್ರಖ್ಯಾತ ವಾಹನ ಸಂಸ್ಥೆ ಹಾಗೂ ಷೆವರ್ಲೆ, ಬ್ಯೂಕ್, ಜಿಎಂಸಿ ಮತ್ತು ಕ್ಯಾಡಿಲಾಕ್ ಕಾರುಗಳನ್ನು ಉತ್ಪಾದಿಸುವ ಜನರಲ್ ಮೋಟರ್ಸ್ ತನ್ನ ವಾಹನಗಳಲ್ಲಿ ಚಾಟ್ಜಿಪಿಟಿ ತಂತ್ರಜ್ಞಾನ ಬಳಸಲು ನಿರ್ಧರಿಸಿದೆ.

ಮೈಕ್ರೋಸಾಫ್ಟ್ ಕಾರ್ಪ್ ಸಹಯೋಗದ ಭಾಗವಾಗಿ ಚಾಟ್ಜಿಪಿಟಿ ಅಳವಡಿಸಲು ನಿರ್ಧರಿಸಿರುವುದಾಗಿ ಜನರಲ್ ಮೋಟರ್ಸ್ ಉಪಾಧ್ಯಕ್ಷ ಸ್ಕಾಟ್ ಮಿಲ್ಲರ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. 

ಸಾಮಾನ್ಯವಾಗಿ ಚಾಟ್ಜಿಪಿಟಿ ಎಲ್ಲದರಲ್ಲೂ ಬಳಕೆಯಲ್ಲಿದೆ. ಹಾಗಾಗಿ ವಾಹನಗಳ ವೈಶಿಷ್ಟ್ಯಗಳು, ಗ್ಯಾರೇಜ್ ಡೋರ್ ಕೋಡ್ನಂತಹ ಪ್ರೋಗ್ರಾಮ್ಗಳು ಅಥವಾ ಕ್ಯಾಲೆಂಡರ್ ವೇಳಾಪಟ್ಟಿ ಸಂಯೋಜನೆ ಮಾಡುವುದು ಹೇಗೆ? ಎಂಬೆಲ್ಲಾ ಮಾಹಿತಿ ತಿಳಿಯಲು ಚಾಟ್ಜಿಪಿಟಿ ಬಳಸಬಹುದು.

ಈ ಹಿಂದೆ ಅಮೆರಿಕದಲ್ಲಿ ಕೃತಕ ಬುದ್ಧಿಮತ್ತೆ ಸಾಧನಗಳನ್ನ ವರ್ಚುವಲ್ ಪರ್ಸನಲ್ ಅಸಿಸ್ಟೆಂಟ್ ಕೆಲಸಕ್ಕಾಗಿ ಬಳಸಲಾಗುತ್ತಿತ್ತು ಎಂದು ಮಿಲ್ಲರ್ ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಮಾಜಿ ಸಚಿವ ಎ.ಮಂಜು ಜೆಡಿಎಸ್ ಸೇರ್ಪಡೆ